ಈ ರಾಶಿಯವರಿಗಿದೆ ಇಂದು ಕೆಲಸದಲ್ಲಿ ಯಶಸ್ಸು

ಮೇಷ ರಾಶಿ

ಇಂದು ಸಾಂಸಾರಿಕ ವಿಷಯಗಳನ್ನು ಬಿಟ್ಟು ಆಧ್ಯಾತ್ಮದೆಡೆಗೆ ಒಲವು ಹೊಂದಲಿದ್ದೀರಿ. ರಹಸ್ಯ ವಿದ್ಯೆ ಮತ್ತು ಗಹನ ಚಿಂತನಶಕ್ತಿ ನಿಮ್ಮ ಮಾನಸಿಕ ಭಾರವನ್ನು ಕಡಿಮೆ ಮಾಡಲಿದೆ. ಆಧ್ಯಾತ್ಮಿಕ ಸಿದ್ಧಿ ಪ್ರಾಪ್ತವಾಗಲಿದೆ.

ವೃಷಭ ರಾಶಿ

ಜೀವನ ಸಂಗಾತಿಯ ಸಾಮೀಪ್ಯವನ್ನು ಆನಂದಿಸಲಿದ್ದೀರಿ. ಕುಟುಂಬದವರೊಂದಿಗೆ ಸಾರ್ವಜನಿಕ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದೀರಿ. ಆನಂದವಾಗಿ ಸಮಯ ಕಳೆಯಲಿದ್ದೀರಿ. ತನು-ಮನದಲ್ಲಿ ಪ್ರಸನ್ನತೆಯ ಅನುಭವವಾಗಲಿದೆ.

ಮಿಥುನ ರಾಶಿ

ಅಪೂರ್ಣ ಕಾರ್ಯಗಳನ್ನು ಮಾಡಿ ಮುಗಿಸಲು ಇಂದು ಶುಭ ದಿನ. ಕುಟುಂಬದಲ್ಲಿ ಆನಂದ ಮತ್ತು ಉಲ್ಲಾಸದ ವಾತಾವರಣವಿರುತ್ತದೆ. ಆರೋಗ್ಯ ಉತ್ತಮವಾಗಿರಲಿದೆ. ಕೆಲಸದಲ್ಲಿ ಯಶಸ್ಸು ದೊರೆಯಲಿದೆ.

ಕರ್ಕ ರಾಶಿ

ಇಂದು ಶಾರೀರಿಕ ಮತ್ತು ಮಾನಸಿಕವಾಗಿ ಪ್ರಸನ್ನತೆಯ ಅನುಭವವಾಗಲಿದೆ. ಮನೆಯಲ್ಲಿ ಸುಖ-ಶಾಂತಿಯ ವಾತಾವರಣ ನೆಲೆಸುತ್ತದೆ. ಮಿತ್ರರು ಮತ್ತು ಆತ್ಮೀಯರ ಜೊತೆಗೆ ಸಂತೋಷವಾಗಿ ಸಮಯ ಕಳೆಯಲಿದ್ದೀರಿ.

ಸಿಂಹ ರಾಶಿ

ಮಾನಸಿಕ ಅಸ್ವಸ್ಥತೆ ಉಂಟಾಗಲಿದೆ. ಕುಟುಂಬದವರೊಂದಿಗೆ ಜಗಳವಾಗಬಹುದು. ತಾಯಿಯ ಆರೋಗ್ಯ ಹದಗೆಡುವ ಸಾಧ್ಯತೆ ಇದೆ. ಜಮೀನು, ಮನೆ ಅಥವಾ ವಾಹನ ಖರೀದಿ ಮತ್ತು ದಸ್ತಾವೇಜಿಗೆ ಸಮಯ ಅನುಕೂಲಕರವಾಗಿಲ್ಲ.

ಕನ್ಯಾ ರಾಶಿ

ಹಿಂದೆ ಮುಂದೆ ಯೋಚಿಸದೇ ಸಾಹಸ ಮಾಡಲು ಹೋಗಬೇಡಿ. ಭಾವನಾತ್ಮಕ ಸಂಬಂಧಗಳು ಏರ್ಪಡಲಿವೆ. ಸಹೋದರಿಯರೊಂದಿಗೆ ಖುಷಿಯಾಗಿ ಕಾಲ ಕಳೆಯಲಿದ್ದೀರಿ. ಮಿತ್ರರನ್ನು ಭೇಟಿ ಮಾಡುವ ಸಾಧ್ಯತೆ ಇದೆ.

ತುಲಾ ರಾಶಿ

ನಿಮ್ಮ ಮಾನಸಿಕ ಪ್ರವೃತ್ತಿ ನಕಾರಾತ್ಮಕವಾಗಿರುತ್ತದೆ. ಕೋಪ ಮತ್ತು ಮಾತಿನ ಮೇಲೆ ನಿಯಂತ್ರಣ ಇಟ್ಟುಕೊಳ್ಳದಿದ್ದರೆ ಕುಟುಂಬದವರೊಂದಿಗೆ ಭಿನ್ನಾಭಿಪ್ರಾಯ ಮೂಡಬಹುದು. ಅನಾವಶ್ಯಕವಾಗಿ ಹಣ ಖರ್ಚಾಗಲಿದೆ.

ವೃಶ್ಚಿಕ ರಾಶಿ

ಸಮಾಧಾನದಿಂದ ದಿನ ಕಳೆಯಿರಿ. ಇಂದು ನೀವು ಶಾರೀರಿಕ ಮತ್ತು ಮಾನಸಿಕವಾಗಿ ಉದ್ವೇಗಗೊಳ್ಳುವ ಸಾಧ್ಯತೆ ಹೆಚ್ಚಿದೆ. ಹೊಟ್ಟೆ ನೋವಿನಿಂದ ಬಳಲುವ ಸಾಧ್ಯತೆಯಿದೆ. ಆಕಸ್ಮಿಕವಾಗಿ ಹಣ ಖರ್ಚಾಗಲಿದೆ.

ಧನು ರಾಶಿ

ಇವತ್ತು ಅತಿಯಾದ ಕೋಪದಿಂದಾಗಿ ಕುಟುಂಬಸ್ಥರು ಮತ್ತು ಇತರರೊಂದಿಗಿನ ಸಂಬಂಧ ಹದಗೆಡಬಹುದು. ನಿಮ್ಮ ಮಾತು ಮತ್ತು ವ್ಯವಹಾರ ಜಗಳಕ್ಕೆ ಕಾರಣವಾಗಬಹುದು. ದುರ್ಘಟನೆಯಿಂದ ಬಚಾವಾಗಿ. ಅನಾರೋಗ್ಯದ ಹಿನ್ನೆಲೆಯಲ್ಲಿ ಹಣ ಖರ್ಚಾಗಲಿದೆ.

ಮಕರ ರಾಶಿ

ಇವತ್ತು ಎಲ್ಲಾ ಕ್ಷೇತ್ರಗಳಲ್ಲೂ ಲಾಭವಾಗಲಿದೆ. ಸ್ನೇಹಿತರನ್ನು ಭೇಟಿಯಾಗಲಿದ್ದೀರಿ. ಪ್ರಿಯ ವ್ಯಕ್ತಿಗಳೊಂದಿಗಿನ ಭೇಟಿ ರೋಮಾಂಚನಕಾರಿಯಾಗಿರಲಿದೆ. ವಿವಾಹ ಉತ್ಸುಕರಿಗೆ ಎದುರಾಗಿದ್ದ ವೈವಾಹಿಕ ಸಮಸ್ಯೆಗಳು ಸುಲಭವಾಗಿ ನಿವಾರಣೆಯಾಗಲಿವೆ.

ಕುಂಭ ರಾಶಿ

ಪ್ರತಿ ಕಾರ್ಯವೂ ಯಶಸ್ವಿಯಾಗಿ ಪೂರ್ಣಗೊಳ್ಳಲಿದೆ. ನೌಕರಿ ಮತ್ತು ವ್ಯಾಪಾರದಲ್ಲಿ ಅನುಕೂಲಕರ ವಾತಾವರಣವಿರುತ್ತದೆ. ಸರ್ಕಾರಿ ಕೆಲಸಗಳು ನಿರ್ವಿಘ್ನವಾಗಿ ಪೂರ್ಣಗೊಳ್ಳಲಿವೆ. ಹಿರಿಯ ಅಧಿಕಾರಿಗಳ ಸಹಕಾರ ದೊರೆಯಲಿದೆ.

ಮೀನ ರಾಶಿ

ಇವತ್ತು ದಿನದ ಆರಂಭದಲ್ಲಿ ಭಯ ಮತ್ತು ಉದ್ವಿಗ್ನತೆ ಹೆಚ್ಚಾಗಿರುತ್ತದೆ. ದೇಹದಲ್ಲಿ ಆಯಾಸದ ಅನುಭವವಾಗಬಹುದು. ಕೆಲಸ ಪೂರ್ಣಗೊಳ್ಳದೇ ಹತಾಶೆ ಕಾಡುತ್ತದೆ. ಅದೃಷ್ಟ ನಿಮ್ಮ ಜೊತೆಗಿಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read