Shocking: ವಿದ್ಯಾರ್ಥಿನಿ ಸಮವಸ್ತ್ರ ಎತ್ತಿ ಚಿತ್ರೀಕರಣ ; ಕಾಮುಕ ಯುವಕ ಅರೆಸ್ಟ್‌ | Watch

ಮೇಘಾಲಯದ ಶಿಲ್ಲಾಂಗ್‌ನಲ್ಲಿ ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಅಸ್ಸಾಂ ಮೂಲದ 24 ವರ್ಷದ ಯುವಕ ಹಿಮಾನ್ ಗೋಗೊಯ್‌ನನ್ನು ಮೇಘಾಲಯ ಪೊಲೀಸರು ಬಂಧಿಸಿದ್ದಾರೆ. ವಿದ್ಯಾರ್ಥಿನಿಯೊಬ್ಬಳ ಸಮವಸ್ತ್ರ ಎತ್ತಿ ಮೊಬೈಲ್‌ನಲ್ಲಿ ಚಿತ್ರೀಕರಿಸಿದ ವಿಡಿಯೋ ವೈರಲ್ ಆದ ನಂತರ ಈ ಪ್ರಕರಣ ಬೆಳಕಿಗೆ ಬಂದಿದ್ದು, ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಮೇ 23ರಂದು ವೈಡಬ್ಲ್ಯೂಸಿಎ, ಉಮ್ಸೋಹ್ಸನ್ ಬಳಿ ನಡೆದಿದ್ದ ಈ ಘಟನೆ ಮೊಬೈಲ್‌ನಲ್ಲಿ ಸೆರೆಯಾಗಿದೆ. ಮೇ 24ರಂದು ವಿಡಿಯೋ ಬಹಿರಂಗಗೊಂಡ ತಕ್ಷಣ ತನಿಖೆ ಆರಂಭಿಸಲಾಯಿತು ಎಂದು ಪೂರ್ವ ಖಾಸಿ ಹಿಲ್ಸ್‌ನ ಎಸ್‌ಪಿ ವಿವೇಕ್ ಸೈಮ್ ತಿಳಿಸಿದ್ದಾರೆ. ವಿಡಿಯೋದಲ್ಲಿ ಮುಖವಾಡ ಧರಿಸಿದ ವ್ಯಕ್ತಿಯೊಬ್ಬ ಶಾಲಾ ವಿದ್ಯಾರ್ಥಿನಿಯ ಸಮವಸ್ತ್ರವನ್ನು ಅಸಭ್ಯವಾಗಿ ಎತ್ತಿ ಮೊಬೈಲ್‌ನಲ್ಲಿ ಫೋಟೋ ತೆಗೆಯುತ್ತಿರುವುದು ಸ್ಪಷ್ಟವಾಗಿ ಕಾಣಿಸಿದೆ.

ಈ ಸಂಬಂಧ ಲುಮ್ದಿಯೆಂಗ್‌ಜ್ರಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಮತ್ತು ಪೋಕ್ಸೋ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ. ಇದೇ ರೀತಿಯ ಮತ್ತೊಂದು ಘಟನೆ ಮೇ 19ರಂದು ಪೊಲೀಸ್ ಬಜಾರ್ ಬಳಿ ನಡೆದಿತ್ತು. ಈ ಎರಡೂ ಪ್ರಕರಣಗಳನ್ನು ವಿಶೇಷ ವರದಿಗಳೆಂದು ವರ್ಗೀಕರಿಸಲಾಗಿದೆ.

ಘಟನೆ ನಡೆದ ನಂತರ ಗೋಗೊಯ್ ಅಸ್ಸಾಂನ ಜೋರ್ಹಟ್‌ಗೆ ಪರಾರಿಯಾಗಿದ್ದ. ತಿಯೋಕ್ ಪೊಲೀಸರ ಸಹಕಾರದೊಂದಿಗೆ ಪೊಲೀಸ್ ತಂಡವು ಮೇ 28ರಂದು ಬಂಕುಕುರಚುವಾದಲ್ಲಿರುವ ಆತನ ಸಂಬಂಧಿಕರ ಮನೆಯಲ್ಲಿ ಆರೋಪಿಯನ್ನು ಬಂಧಿಸಿದೆ. ಆತನ ಮೊಬೈಲ್ ಫೋನ್ ಮತ್ತು ಇತರ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ತಿಯೋಕ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಹಿಂದಿನ ಪ್ರಕರಣವೊಂದಕ್ಕೂ ಇವನು ಸಂಬಂಧ ಹೊಂದಿದ್ದಾನೆ ಎಂದು ತಿಳಿದುಬಂದಿದೆ. ಆರೋಪಿಯನ್ನು ಶಿಲ್ಲಾಂಗ್‌ಗೆ ಕರೆತಂದು ನ್ಯಾಯಾಲಯದ ವಿಚಾರಣೆಗೆ ಒಳಪಡಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಈ ಪ್ರಕರಣವು ಶಾಲಾ ವಿದ್ಯಾರ್ಥಿನಿಯರ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read