ಅಮ್ಮನಿಂದಲೇ ಅಮಾನವೀಯ ಕೃತ್ಯ: ಕಂದನಿಗೆ ಸಿಗರೇಟ್ ಸೇದಿಸಿ ಮದ್ಯ ಕುಡಿಸಿದ ಮಹಿಳೆ

ಅಸ್ಸಾಂನ ಸಿಲ್ಚಾರ್‌ನ ಮಹಿಳೆಯೊಬ್ಬರು ತನ್ನ 20 ತಿಂಗಳ ಮಗುವಿಗೆ ಸಿಗರೇಟ್ ಸೇದಲು ಮತ್ತು ಮದ್ಯಪಾನ ಮಾಡಲು ಒತ್ತಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಬುಧವಾರ ರಾತ್ರಿ ಸಿಲ್ಚಾರ್‌ನ ಚೆಂಗ್‌ಕುರಿಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಸ್ಥಳೀಯ ಚೈಲ್ಡ್ ಹೆಲ್ಪ್‌ ಲೈನ್ ಸೆಲ್ ಫೋಟೋಗಳೊಂದಿಗೆ ಮಹಿಳೆಯ ವಿರುದ್ಧ ದೂರನ್ನು ಸ್ವೀಕರಿಸಿದೆ. ದೂರಿನ ನಂತರ, ಪೊಲೀಸರು ಮಹಿಳೆಯ ನಿವಾಸವನ್ನು ತಲುಪಿ ಮಗುವನ್ನು ರಕ್ಷಿಸಿದ್ದಾರೆ. ವಿಚಾರಣೆಗಾಗಿ ತಾಯಿಯನ್ನು ವಶಕ್ಕೆ ಪಡೆದಿದ್ದಾರೆ.

ಬುಧವಾರ ರಾತ್ರಿ ಸಿಲ್ಚಾರ್‌ನ ಚೆಂಗುರಿಯಲ್ಲಿ ಮಗುವಿಗೆ ಹೊಗೆ ಮತ್ತು ಮದ್ಯ ಕುಡಿಸಿ ತಾಯಿಯೊಬ್ಬಳು ತನ್ನ ಮಗುವಿನ ಮೇಲೆ ದೌರ್ಜನ್ಯ ಎಸಗಿರುವ ವಿಷಯ ತಿಳಿದ ನಂತರ ಪೊಲೀಸರು ಸೂಕ್ತ ಕ್ರಮ ಕೈಗೊಂಡು ಮಗುವನ್ನು ರಕ್ಷಿಸಿ, ತಾಯಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ಮಕ್ಕಳ ಸಹಾಯವಾಣಿ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ.

ತಾಯಿ ಮತ್ತು ಮಗು ಮಕ್ಕಳ ಕಲ್ಯಾಣ ಸಮಿತಿ(ಸಿಡಬ್ಲ್ಯೂಸಿ) ವಶದಲ್ಲಿದ್ದು, ಸಂಪೂರ್ಣ ತನಿಖೆಯ ನಂತರ, ದೃಶ್ಯ ಪುರಾವೆಗಳನ್ನು ಪರಿಶೀಲಿಸಿ ಮತ್ತು ತಾಯಿಯನ್ನು ವಿಚಾರಣೆಗೆ ಒಳಪಡಿಸಿ, ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ವರದಿಯಾಗಿದೆ.

ಇದಕ್ಕೆ ಅನೇಕ ನೆಟಿಜನ್‌ಗಳು ಪ್ರತಿಕ್ರಿಯಿಸಿ ಮಹಿಳೆಯ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಕೆಲವರು ಮಗುವನ್ನು ದತ್ತು ನೀಡಬೇಕೆಂದು ಹೇಳಿದ್ದಾರೆ.

ಇದೇ ರೀತಿಯ ಘಟನೆಯಲ್ಲಿ ಮಹಿಳೆಯೊಬ್ಬರು ತನ್ನ ಮಗುವನ್ನು ಎತ್ತಿಕೊಂಡು ರೀಲ್ ಮಾಡುವಾಗ ಸಿಗರೇಟ್ ಸೇದುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ವೀಡಿಯೊದಲ್ಲಿ, ಮಹಿಳೆಯು ಮುಗ್ಧ ಮಗುವನ್ನು ಹೊತ್ತುಕೊಂಡು, ಕೈಯಲ್ಲಿ ಸಿಗರೇಟ್ ಹಿಡಿದುಕೊಂಡು ಹಳೆಯ ಪ್ರಸಿದ್ಧ ಬಾಲಿವುಡ್ ಹಾಡಿನ ಟ್ಯೂನ್‌ ಗೆ ಡ್ಯಾನ್ಸ್ ಮಾಡಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಬೆನ್ನಲ್ಲೇ, ನೆಟಿಜನ್‌ಗಳು ಕೃತ್ಯವನ್ನು ಕರುಣಾಜನಕ ಎಂದು ಕರೆದಿದ್ದು, ಮಹಿಳೆಯ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.

https://twitter.com/ForMenIndia_/status/1802020406133723247

https://twitter.com/DeepikaBhardwaj/status/1802647016352186634

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read