ಗುವಾಹಟಿ: ಅಸ್ಸಾಂನ ಈಶಾನ್ಯ ಭಾಗದ ಹಲವೆಡೆ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 5.8ರಷ್ಟು ತೀವ್ರತೆ ದಾಖಲಾಗಿದೆ.
ಗುವಾಹಟಿ ಪ್ರದೇಶದಲ್ಲಿ ಇಂದು ಸಂಜೆ 4.41ರ ಸುಮಾರಿಗೆ ಭೂಮಿ ಕಂಪಿಸಿದೆ. ಉತ್ತರ ಬಂಗಾಳ, ಭೂತಾನ್ ಗಳಲ್ಲಿಯೂ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಕಂಪದ ಕೇಂದ್ರ ಇಂದು ಉದಲ್ಗುರಿ ಜಿಲ್ಲೆಯಲ್ಲಿ 5 ಕಿ.ಮೀ ಆಳದಲ್ಲಿ ಪತ್ತೆಯಾಗಿದೆ.
ಭೂಕಂಪದಲ್ಲಿ ಈವರೆಗೆ ಯಾವುದೇ ಆಸ್ತಿ ಪಾಸ್ತಿ, ಪ್ರಾಣ ಹಾನಿ ಬಗ್ಗೆ ವರದಿಯಾಗಿಲ್ಲ.