ಅಸ್ಸಾಂನಲ್ಲಿ ಭಾನುವಾರ ಅಪರೂಪದ ಘಟನೆಯೊಂದು ನಡೆದಿದೆ. ಅಸ್ಸಾಂ ಪೋಲಿಸ್ ಮಹಾ ನಿರ್ದೇಶಕರಾಗಿರುವ ಜ್ಞಾನೇಂದ್ರ ಪ್ರತಾಪ್ ಸಿಂಗ್ ಅವರಿಗೆ ಐಪಿಎಸ್ ಅಧಿಕಾರಿಯಾಗಿರುವ ಪುತ್ರಿ ಸೆಲ್ಯೂಟ್ ಹೊಡೆದಿದ್ದಾರೆ. ಇದಕ್ಕೆ ಪ್ರತಿಯಾಗಿ ಜ್ಞಾನೇಂದ್ರ ಪ್ರತಾಪ್ ಸಿಂಗ್ ಸಹ ಸೆಲ್ಯೂಟ್ ಮಾಡಿದ್ದಾರೆ.
ಜ್ಞಾನೇಂದ್ರ ಪ್ರತಾಪ್ ಸಿಂಗ್ ಅವರ ಪುತ್ರಿ ಐಶ್ವರ್ಯ ಸಿಂಗ್, ಸರ್ದಾರ್ ವಲ್ಲಭಬಾಯ್ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಿಂದ ಪದವಿ ಪೂರ್ಣಗೊಳಿಸಿ ಹೊರಬಂದಿದ್ದು ಪಾಸಿಂಗ್ ಔಟ್ ಕಾರ್ಯಕ್ರಮದಲ್ಲಿ ಈ ಅಪರೂಪದ ಘಟನೆ ನಡೆದಿದೆ.
ಇದರ ಫೋಟೋವನ್ನು ಟ್ವೀಟ್ ಮಾಡಿರುವ ಜ್ಞಾನೇಂದ್ರ ಪ್ರತಾಪ್ ಸಿಂಗ್ ‘ನನಗೆ ಪದಗಳೇ ಸಾಲುತ್ತಿಲ್ಲ’ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ತಮ್ಮ ಪುತ್ರಿಯ ಸಾಧನೆಗೆ ಮನದುಂಬಿ ಹಾರೈಸಿದ್ದಾರೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
https://twitter.com/gpsinghips/status/1624404541486800897?ref_src=twsrc%5Etfw%7Ctwcamp%5Etweetembed%7Ctwterm%5E1624404541486800897%7Ctwgr%5E332ec8ae811f347bac2eb184ff5f6d3627c7ff43%7Ctwcon%5Es1_&ref_url=https%3A%2F%2Fnortheastindia24.com%2Fmoment-of-pride-assam-dgp-salutes-ips-daughter-at-her-passing-out-parade%2F