ಬಳ್ಳಾರಿ: ಕರ್ತವ್ಯ ನಿರತ ಎಎಸ್ ಐ ವೋರ್ವರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಹೊಸಪೇಟೆ ಠಾಣೆಯ ಪಿಎಸ್ ಐ ರಾಜಸ್ಥಾನದಲ್ಲಿ ಮೃತಪಟ್ಟಿದ್ದಾರೆ.
ಹೊಸಪೇಟೆ ಗ್ರಾಮೀಣ ಠಾಣೆಯ ಎಎಸ್ ಐ ಹಾಲಪ್ಪ ಹೃದಯಾಘಾತಕ್ಕೆ ಬಲಿಯಾದವರು. ಆಗಸ್ಟ್ 17ರಂದು ಕರ್ತವ್ಯದ ಮೇಲೆ ಹೊಸಪೇಟೆಯಿಂದ ರಾಜಸ್ಥಾನದ ಜೋಧಪುರಕ್ಕೆ ತೆರಳಿದ್ದರು. ಅವರೊಂದಿಗೆ ಪೊಲೀಸ್ ಕಾನ್ಸ್ ಟೇಬಲ್, ಹೆಡ್ ಕಾನ್ಸ್ ಟೆಬಲ್ ಕೂಡ ಇದ್ದರು. ಕರ್ತವ್ಯದಲ್ಲಿದ್ದ ವೇಳೆ ಹಾಲಪ್ಪ ಅವರುಗೆ ಹೃದಯಾಘಾತ ಸಂಭವಿಸಿ ಕೊನೆಯುಸಿರೆಳೆದಿದ್ದಾರೆ.
ಮೃತ ಹಾಲಪ್ಪ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ಗ್ರಾಮದವರು. ನಾಳೆ ಸ್ವಗ್ರಾಮದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.