ಬೆಂಗಳೂರು: ತೀವ್ರ ವಿರೋಧದ ನಡುವೆಯೂ ಇಂದು ಭಾರತ-ಪಾಕಿಸ್ತಾನ ನಡುವೆ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ. ಪಹಲ್ಗಾಮ್ ದಾಳಿ ಬಳಿಕ ಇದೇ ಮೊದಲ ಬಾರಿಗೆ ಭಾರತ-ಪಾಕ್ ಪಂದ್ಯ ನಡೆಯುತ್ತಿದೆ. ಬಿಜೆಪಿ ನಾಯಕರೂ ಈ ಪಂದ್ಯ ರದ್ದು ಮಾಡಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಭಾರತ-ಪಾಕ್ ಕ್ರಿಕೆಟ್ ಮ್ಯಾಚ್ ವಿಚಾರವಾಗಿ ಬಿಜೆಪಿ ಶಾಸಕ ಡಾ.ಅಶ್ವತ್ಥನಾರಾಯಣ ಪ್ರತಿಕ್ರಿಯೆ ನೀಡಿದ್ದಾರೆ. ಪಾಕಿಸ್ತಾನ ಪಕ್ಕದ ದೇಶ. ಸಂಬಂಧ ಬಿಡೋಕೂ ಆಗಲ್ಲ, ಇಟ್ಟುಕೊಳ್ಳೋಕೂ ಆಗಲ್ಲ. ಕ್ರೀಡೆ ಮೂಲಕ ಸಂಬಂಧ ಇಟ್ಟುಕೊಳ್ಳಲು ಬಯಸಿದ್ದಾರೆ. ಪಾಕಿಸ್ತಾನದ ಜೊತೆ ಕ್ರಿಕೆಟ್ ಪಂದ್ಯಾವಳಿಗೆ ಜನರ ಆಕ್ರೋಶವಿದೆ. ಪಹಲ್ಗಾಮ್ ಸಂತ್ರಸ್ತರಿಗೆ ಬೇಸರವಿದೆ ಎಂದಿದ್ದಾರೆ.
ಪಾಕಿಸ್ತಾನವನ್ನು ಜೊತೆಗಿಟ್ಟುಕೊಂಡೇ ಗುದ್ದಬೇಕು. ತುಂಬಾ ದೂರ ಅದನ್ನು ಬಿಟ್ಟರೆ ಕಿವಿ ಹಿಂಡಲು ಆಗಲ್ಲ. ಪಾಕಿಸ್ತಾನವನ್ನು ಜೊತೆಗಿಟ್ಟುಕೊಂಡೇ ಕಿವಿ ಹಿಂಡಬೇಕು ಎಂದು ಹೇಳಿದ್ದಾರೆ.