3,500 ಕುಟುಂಬಗಳಿಗೆ ತಕ್ಷಣ ಜಾಗ ಖಾಲಿ ಮಾಡುವಂತೆ ಡಿಸಿ ಸೂಚನೆ: ಕಂಗಾಲಾದ ನಿವಾಸಿಗಳು

ಬೆಂಗಳೂರು: ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಹೆಚ್ ಎಂತಿ ವಾರ್ಡ್ ನ ಆಶ್ರಯ ನಗರದಲ್ಲಿರುವ 3500 ಕುಟುಂಬಗಳಿಗೆ ಏಕಾಏಕಿ ಜಾಗ ಖಾಲಿ ಮಾಡುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.

ಕಳೆದ 25 ವರ್ಷಗಳಿಂದ ಆಶ್ರಯ ನಗರದಲ್ಲಿ ವಾಸವಾಗಿದ್ದ ಕುಟುಂಬಗಳು ಇದೀಗ ಕಂಗಾಲಾಗಿದ್ದು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ.

ಈ ಪ್ರದೇಶದಲ್ಲಿ ಹೆಚ್ಚು ಹೈಟೆನ್ಶನ್ ವಿದ್ಯುತ್ ವೈರ್ ಗಳು ಹಾದುಹೋಗಿವೆ. ಈ ಹಿನ್ನೆಲೆಯಲ್ಲಿ ಈ ಪ್ರದೇಶ ವಾಸಕ್ಕೆ ಯೋಗ್ಯವಲ್ಲ. ಅಪಾಯಕಾರಿಯಾಗಿದೆ ಎಂದು ಘೋಷಿಸಲಾಗಿದೆ. ಈ ನಿಟ್ಟಿನಲ್ಲಿ ಅಶ್ರಯ ನಗರದ ಜನ ಜಾಗ ಖಾಲಿ ಮಾಡುವಂತೆ ಜಿಲ್ಲಾಡಳಿತ ನೊಟಿಸ್ ನೀಡಿದೆ. ಸರ್ಕಾರದ ಈ ಕ್ರಮಕ್ಕೆ ನಿವಾಸಿಗಳು ಸಿಡಿದೆದ್ದಿದ್ದಾರೆ.

ಇದ್ದಕ್ಕಿದ್ದಂತೆ ಜಾಗ ಖಾಲಿ ಮಾಡಿ ಎಂದರೆ ಹೇಗೆ? ಯಾವುದೇಸೂಕ್ತ ವ್ಯವಸ್ಥೆ, ಸೌಲಭ್ಯವನ್ನೂ ಮಾಡದೇ ಅಲ್ಲಿ ಹೋಗಿ ಇಲ್ಲಿ ಹೋಗಿ ಎಂದು ಹೇಳುತ್ತಿದ್ದಾರೆ. ಗೌಡನಹಳ್ಳಿ ಬಳಿ 1 ಎಕರೆ ಜಾಗದಲ್ಲಿ ವ್ಯವಸ್ಥೆಯಾಗಿದೆ ಎನ್ನುತ್ತಿದ್ದಾರೆ. 3500 ಕೂಟುಂಬಗಳು ಒಂದು ಎಕರೆ ಜಾಗದಲ್ಲಿ ಇರಲು ಸಾಧ್ಯವಿಲ್ಲ. ಇಲ್ಲಿನ ಕುಟುಂಬಗಳಿಗೆ ಸರ್ಕಾರ ನಿವೇಶನ ನೀಡಲಿ ಬಳಿಕ ಖಾಲಿ ಮಾಡಿಸಲಿ ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read