ಬೆಂಗಳೂರು : ಇಂದು ಸಂಜೆಯೊಳಗೆ ಮಹೇಶ್ ತಿಮರೋಡಿಯನ್ನು ಅರೆಸ್ಟ್ ಮಾಡಿ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಪೊಲೀಸರಿಗೆ ಸೂಚನೆ ನೀಡಿದ್ದಾರೆ .
ಸಿಎಂ ಸಿದ್ದರಾಮಯ್ಯ ಕೊಲೆಗಾರ ಎಂಬ ಮಹೇಶ್ ತಿಮರೋಡಿ ಹೇಳಿಕೆ ಇಂದು ಸದನದಲ್ಲಿ ಭಾರಿ ಚರ್ಚೆಗೆ ಕಾರಣವಾಯಿತು.ಈ ಬೆನ್ನಲ್ಲೇ ಮಹೇಶ್ ತಿಮರೋಡಿ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಪರಮೇಶ್ವರ್ ಸೂಚನೆ ನೀಡಿದ್ದು, ಸಂಜೆಯೊಳಗೆ ಬಂಧಿಸಿ ಎಂದು ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಿದವನೇ ಸಿದ್ದರಾಮಯ್ಯ ಅವರು ಕೊಲೆಗಾರ ಎಂದಿದ್ದಾರೆ. ರಾಜ್ಯದ ಮುಖ್ಯಮಂತ್ರಿ ವಿರುದ್ಧವೇ 24 ಕೊಲೆ ಆರೋಪ ಮಾಡಿದ್ದಾರೆ . ಇದಕ್ಕೂ ಎಸ್ ಐ ಟಿ ರಚನೆ ಮಾಡಬೇಕು ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ. ಅಶೋಕ್ ಹೇಳಿಕೆ ಬೆನ್ನಲ್ಲೇ ಮಹೇಶ್ ತಿಮರೋಡಿ’ ವಿರುದ್ಧ ಕ್ರಮ ಕೈಗೊಳ್ಳಲು ಗೃಹ ಸಚಿವ ಜಿ.ಪರಮೇಶ್ವರ್ ಸೂಚನೆ ನೀಡಿದ್ದಾರೆ.
You Might Also Like
TAGGED:ಮಹೇಶ್