ಬಳ್ಳಾರಿ : ನಿಷೇಧಿತ ಪಿಎಫ್ ಐ (PFI) ಸಂಘಟನೆ ಯುವಕರಿಗೆ ಶಸ್ತ್ರಾಸ್ತ್ರ ತರಬೇತಿ (Weapons Training) ನೀಡುತ್ತಿದ್ದ ಆರೋಪಿ ಮೊಹಮ್ಮದ್ ಯೂನಸ್ (Mohammad Yunus)ನನ್ನು ಬಳ್ಳಾರಿಯಲ್ಲಿ ಎನ್ ಐಎ (NIA) ಅಧಿಕಾರಿಗಳು ಬಂಧಿಸಿರುವ ಘಟನೆ ನಡೆದಿದೆ.
ಬಳ್ಳಾರಿ ನಗರದ ಕೌಲ್ ಬಜಾರ್ ನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಮೊಹಮ್ಮದ್ ಯೂನಸ್ (33)ನನ್ನು ಎನ್ ಐಎ ಅಧಿಕಾರಿಗಳು ಬಂಧಿಸಿದ್ದಾರೆ.
ಆರೋಪಿ ಯೂನಸ್ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಪಿಎಫ್ ಐ ಸಂಘಟನೆಯ ಸದಸ್ಯರಿಗೆ ಶಸ್ತ್ರಾಸ್ತ್ರ ತರಬೇತಿ ನೀಡುತ್ತಿದ್ದ. ಪಿಎಫ್ ಐ ಬ್ಯಾನ್ ಆದ ಬಳಿಕ ತಲೆಮರೆಸಿಕೊಂಡು ಕುಟುಂಬ ಸಮೇತ ಬಳ್ಳಾರಿಯ ಕೌಲ್ ಬಜಾರ್ ನಲ್ಲಿ ಗುರುತು ಬದಲಿಸಿಕೊಂಡು ಪ್ಲಂಬರ್ ಕೆಲಸ ಮಾಡಿಕೊಂಡಿದ್ದ ಪಿಎಫ್ ಐ ಸಂಘಟನೆಯ ಯುವಕರಿಗೆ ಶಸ್ತ್ರಾಸ್ತ್ರ ತರಬೇತಿ ನೀಡುತ್ತಿದ್ದ ಯೂನೂಸ್ ಆಂಧ್ರಪ್ರದೇಶ ಮತ್ತು ತೆಲಂಗಾಣದ ರಾಜ್ಯಗಳ ರಾಜ್ಯ ಸಂಯೋಜಕನಾಗಿದ್ದ. ಸದ್ಯ ಎನ್ ಐಎ ಅಧಿಕಾರಿಗಳು ಬಂಧಿಸಿದ್ದಾರೆ