ಭಾರತ – ಪಾಕ್ ಪಂದ್ಯದ ವೇಳೆ ಅನುಷ್ಕಾ ಶರ್ಮ ಫೋಟೋ ಸೆರೆಹಿಡಿದ ಗಾಯಕ; ವಿಡಿಯೋ ವೈರಲ್

article-image

ಶನಿವಾರ ನಡೆದ ಭಾರತ- ಪಾಕಿಸ್ತಾನ ಹೈವೋಲ್ಟೇಜ್ ಕ್ರಿಕೆಟ್ ಪಂದ್ಯಾವಳಿ ವೇಳೆ ಖ್ಯಾತ ಹಿನ್ನೆಲೆ ಗಾಯಕ ಅರಿಜಿತ್ ಸಿಂಗ್, ನಟಿ- ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾರ ಫೋಟೋ ಕ್ಲಿಕ್ಕಿಸಿರುವ ವಿಡಿಯೋ ವೈರಲ್ ಆಗಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ವೇಳೆ ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳು ಸೇರಿದ್ದರು. ತಮ್ಮ ಪತಿ ಸೇರಿದಂತೆ ಭಾರತ ತಂಡವನ್ನ ಪ್ರೋತ್ಸಾಹಿಸಲು ನಟಿ ಅನುಷ್ಕಾ ಶರ್ಮ ಕ್ರೀಡಾಂಗಣದ ವಿಐಪಿ ಗ್ಯಾಲರಿಯಲ್ಲಿ ಕುಳಿತು ಪಂದ್ಯ ವೀಕ್ಷಿಸುತ್ತಿದ್ದರು.

ಇದೇ ವೇಳೆ ಅನುಷ್ಕಾ ಕೂತಿದ್ದ ಗ್ಯಾಲರಿಯ ಪಕ್ಕದ ವಿಐಪಿ ಗ್ಯಾಲರಿಯಲ್ಲಿದ್ದ ಗಾಯಕ ಅರಿಜಿತ್ ಸಿಂಗ್ ನಟಿಯನ್ನ ನೋಡಿದಾಕ್ಷಣ ಪರಸ್ಪರ ಸಂತೋಷ ವಿನಿಮಯ ಮಾಡಿಕೊಂಡರು. ನಂತರ ಅರಿಜಿತ್ ಸಿಂಗ್ ಫೋಟೋಗೆ ಪೋಸ್ ನೀಡುವಂತೆ ನಟಿಯನ್ನ ಕೇಳಿಕೊಂಡಿದ್ದು ಗೆಲುವಿನ ಚಿಹ್ನೆಯೊಂದಿಗೆ ಅನುಷ್ಕಾ ಶೆಟ್ಟಿ ಪೋಸ್ ನೀಡಿದರು. ಅರಿಜಿತ್ ಸಿಂಗ್ ಅನುಷ್ಕಾರ ಫೋಟೋ ಸೆರೆಹಿಡಿಯುವ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕ್ರೀಡೆ ಆರಂಭಕ್ಕೂ ಮುನ್ನ ಅರಿಜಿತ್ ಸಿಂಗ್ ಕ್ರೀಡಾಂಗಣದಲ್ಲಿ ವಿವಿಧ ಹಾಡುಗಳನ್ನು ಹಾಡಿದರು. ಇವರೊಂದಿಗೆ ಸುನಿಧಿ ಚೌಹಾಣ್, ಶಂಕರ್ ಮಹಾದೇವನ್ ಮತ್ತು ಸುಖ್ವಿಂದರ್ ಸಿಂಗ್ ಕೂಡ ಪ್ರೇಕ್ಷಕರಿಗೆ ಗಾಯನ ಪ್ರದರ್ಶನ ನೀಡಿದರು.

https://twitter.com/arijitianfans/status/1713268185124978899?ref_src=twsrc%5Etfw%7Ctwcamp%5Etweetembed%7Ctwterm%5E1713268185124978899%7Ctwgr%5E3651863c3c7cd1b48029fdee842bd67d1a8b4b1c%7Ctwcon%5Es1_&ref_url=https%3A%2F%2Fwww.freepressjournal.in%2Fentertainment%2Fwatch-arijit-singh-clicks-anushka-sharmas-photos-during-ind-vs-pak-match-their-adorable-exchange-goes-viral

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read