ಪದೇ ಪದೇ ಸೋಪ್ ಬಳಸಿ ಕೈ ಒರಟಾಗಿದೆಯಾ…..? ಮೃದುಗೊಳಿಸಲು ಇಲ್ಲಿದೆ ಟಿಪ್ಸ್

ಕೊರೋನಾ ವೈರಸ್ ಪ್ರಪಂಚದಾದ್ಯಂತ ಹಾನಿಯನ್ನುಂಟುಮಾಡುತ್ತಿದೆ. ಕರೋನಾ ವೈರಸ್ ಸೋಂಕಿನಿಂದಾಗಿ ಜನರು ತಮ್ಮ ಮನೆಗಳನ್ನು ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿರಿಸಿಕೊಳ್ಳುತ್ತಿದ್ದಾರೆ. ವೈದ್ಯರು ನೀಡಿದ ಸೂಚನೆಗಳ ಪ್ರಕಾರ, ಜನರು ಪದೇ ಪದೇ ಸೋಪ್ ನಿಂದ ಕೈ ತೊಳೆಯುತ್ತಿದ್ದಾರೆ.

ಸೋಪ್, ನೀರು ಮತ್ತು ಸ್ಯಾನಿಟೈಜರ್ ನಿಂದ ಕೈಗಳನ್ನು ಪದೇ ಪದೇ ಶುದ್ಧೀಕರಿಸುವುದರಿಂದ ಅನೇಕ ಜನರು ಶುಷ್ಕತೆ, ಕೈ ತುರಿಕೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನೀವು ಇದೇ ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಮೃದು ಕೈ ಪಡೆಯಲು ಇಲ್ಲಿದೆ ಟಿಪ್ಸ್.

ಕೆಲವೊಮ್ಮೆ ಸಾಬೂನಿನಿಂದ ಕೈ ತೊಳೆದ್ರೆ ಕೈ ಒಣಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಕೈ ತೊಳೆದ ನಂತ್ರ ಎಣ್ಣೆಯಿಂದ 2 ನಿಮಿಷಗಳ ಕಾಲ ಮಸಾಜ್ ಮಾಡಿ. ಕೈ ಮಸಾಜ್ ಮಾಡಲು ನೀವು ತೆಂಗಿನಎಣ್ಣೆ, ಸಾಸಿವೆ ಎಣ್ಣೆಯನ್ನು ಬಳಸಬಹುದು.

ಕೆಲವರು ಚರ್ಮಕ್ಕೆ ಎಣ್ಣೆ  ಬಯಸುವುದಿಲ್ಲ. ಅಂತವರು ಕೈಗೆ ಹಾಲಿನ ಕೆನೆ ಹಚ್ಚಿಕೊಂಡು ಉಜ್ಜಿಕೊಳ್ಳಬೇಕು. ಇದ್ರಿಂದ ಕೈ ತೇವಾಂಶ ಪಡೆಯುತ್ತದೆ.

ಕೈಗಳನ್ನು ಮೃದುಗೊಳಿಸಲು ನೀವು 1 ಟೀ ಚಮಚ ರೋಸ್ ವಾಟರ್‌ನಲ್ಲಿ ಗ್ಲಿಸರಿನ್‌ನ ಕೆಲವು ಹನಿಗಳನ್ನು ಬೆರೆಸಿ ಅನ್ವಯಿಸಬಹುದು. ನಿಯಮಿತವಾಗಿ ಗ್ಲಿಸರಿನ್ ಮತ್ತು ರೋಸ್ ವಾಟರ್ ಬಳಸಿ ಕೈಗಳಿಗೆ ಮಸಾಜ್ ಮಾಡಿದ್ರೆ ಮೃದುವಾಗುತ್ತವೆ.

ಹಾಲಿನ ಕೆನೆ ಮತ್ತು ಬಾಡಿ ಲೋಷನ್ ಕೂಡ ಬಳಸಬಹುದು. ರಾತ್ರಿ ಕೈಗಳಿಗೆ ಹಚ್ಚಿ ಮಲಗಿದ್ರೆ ಕೈ ಚರ್ಮ ಮೃದುವಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read