ಬೇಸಿಗೆಯಲ್ಲೂ ನಿಮ್ಮ ಪಾದಗಳು ತಣ್ಣಗಿರುತ್ತವೆಯೇ…..? ಹಾಗಿದ್ದಲ್ಲಿ ಇದು ಗಂಭೀರ ಕಾಯಿಲೆಯ ಲಕ್ಷಣ…..!

ಚಳಿಗಾಲದಲ್ಲಿ ಕೈಕಾಲುಗಳು ತಣ್ಣಗಿರುತ್ತವೆ. ಆದರೆ ಕೆಲವರಿಗೆ ಬಿರುಬಿಸಿಲಿನಲ್ಲೂ ಕೈಗಳು ಮತ್ತು ಪಾದಗಳು ತಂಪಾಗಿರುತ್ತದೆ. ಚಳಿಗಾಲದಲ್ಲಿ ಈ ಸಮಸ್ಯೆ ಮತ್ತಷ್ಟು ಹೆಚ್ಚುತ್ತದೆ. ಶೀತ ವಾತಾವರಣದಿಂದಾಗಿ ಪಾದಗಳು ವಿಪರೀತ ತಣ್ಣಗಾಗುತ್ತವೆ. ಕೆಲವರಿಗೆ ಸಾಕ್ಸ್‌ ಧರಿಸಿದರೂ ಪಾದಗಳು ಬೆಚ್ಚಗಾಗುವುದಿಲ್ಲ.

ಪಾದಗಳು ಎಲ್ಲಾ ಋತುವಿನಲ್ಲೂ ಮಂಜುಗಡ್ಡೆಯಂತೆ ತಣ್ಣಗಿದ್ದರೆ ಅದರ ಹಿಂದಿನ ಕಾರಣವು ತುಂಬಾ ಗಂಭೀರವಾಗಿರುತ್ತದೆ. ಚಳಿಗಾಲದಲ್ಲಿ ಮಾತ್ರ ಈ ರೀತಿ ಆಗುತ್ತಿದ್ದರೆ ದಪ್ಪನೆಯ ಸಾಕ್ಸ್‌ ಮತ್ತು ಗ್ಲೌಸ್‌ಗಳನ್ನು ಧರಿಸಬಹುದು.

ಎಲ್ಲಾ ಹವಾಮಾನದಲ್ಲೂ ಪಾದಗಳು ತಣ್ಣಗಿದ್ದರೆ ಅಂಥವರಿಗೆ ಮಧುಮೇಹ ಅಥವಾ ರಕ್ತಹೀನತೆಯ ಸಮಸ್ಯೆ ಇರುವ ಸಾಧ್ಯತೆ ಹೆಚ್ಚು. ಅವರ ಕೈಕಾಲುಗಳಲ್ಲಿನ ರಕ್ತನಾಳಗಳು ಕುಗ್ಗತೊಡಗುತ್ತವೆ. ಇದರಿಂದಾಗಿ ರಕ್ತದ ಹರಿವು ಕಡಿಮೆಯಾಗುತ್ತದೆ. ಆಗ ಪಾದಗಳು ತಣ್ಣಗಾಗಿಬಿಡುತ್ತವೆ.

ಕೈ ಮತ್ತು ಪಾದಗಳು ಯಾವಾಗಲೂ ತಣ್ಣಗಿರುವುದಕ್ಕೆ ಇನ್ನೊಂದು ದೊಡ್ಡ ಕಾರಣವೆಂದರೆ ಅವರ ರಕ್ತ ಪರಿಚಲನೆ ಕುಗ್ಗುವುದು. ಇದರಿಂದಾಗಿ ರಕ್ತದ ಹರಿವು ಕಡಿಮೆಯಾಗುತ್ತದೆ. ದೇಹದ ಉಷ್ಣತೆಯು ಕಡಿಮೆಯಾಗಲು ಪ್ರಾರಂಭಿಸುತ್ತದೆ.

ರಕ್ತ ಪರಿಚಲನೆ ಸರಿಯಾಗಿಲ್ಲದಿದ್ದರೆ ಪಾದಗಳು ತಂಪಾಗಿಯೇ ಇರುತ್ತವೆ. ಒಂದೇ ಸ್ಥಳದಲ್ಲಿ ದೀರ್ಘಕಾಲ ಕುಳಿತುಕೊಂಡರೆ ರಕ್ತ ಪರಿಚಲನೆಯು ಕ್ಷೀಣಿಸಲು ಪ್ರಾರಂಭಿಸುತ್ತದೆ ಮತ್ತು ಪಾದಗಳು ತಣ್ಣಗಾಗುತ್ತವೆ.

ದೇಹದಲ್ಲಿನ ಕೆಂಪು ರಕ್ತ ಕಣಗಳು ಕಡಿಮೆಯಾಗಲು ಪ್ರಾರಂಭಿಸಿದಾಗಲೂ ಪಾದಗಳು ತಣ್ಣಗಾಗುತ್ತವೆ. ರಕ್ತಹೀನತೆ ಹೊಂದಿರುವ ರೋಗಿಯ ದೇಹದಲ್ಲಿ ಈ ಲಕ್ಷಣ ಕಂಡುಬರುತ್ತದೆ. ವಿಟಮಿನ್‌ B12, ಫೋಲೇಟ್ ಮತ್ತು ಕಬ್ಬಿಣದ ಕೊರತೆಯಿಂದಾಗಿ ಕೂಡ ಈ ಸಮಸ್ಯೆ ಆಗಬಹುದು. ದೀರ್ಘಕಾಲದ ಮೂತ್ರಪಿಂಡದ ಕಾಯಿಲೆಯಿದ್ದರೂ ಈ ರೀತಿ ಪಾದಗಳು ತಣ್ಣಗಿರುತ್ತವೆ.

ಸದಾಕಾಲ ಪಾದಗಳು ತಣ್ಣಗೇ ಇರುತ್ತವೆ ಎನಿಸಿದಲ್ಲಿ ಒಮ್ಮೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷಿಸಿ. ಮಧುಮೇಹಿಗಳ ಸಕ್ಕರೆಯ ಮಟ್ಟವು ಏರುತ್ತದೆ ಮತ್ತು ಇಳಿಯುತ್ತದೆ, ಇದರಿಂದಾಗಿ ಅವರಿಗೆ ಶೀತ ಪಾದದ ಸಮಸ್ಯೆ ಇರುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read