ನಿಮ್ಮ ಮಕ್ಕಳು ಮರೆವಿನಿಂದ ಬಳಲುತ್ತಿದ್ದಾರೆಯೇ ?: ಈ ಕ್ರಮಗಳನ್ನು ಅನುಸರಿಸಿ !

 

ಕೆಲವೊಂದು ಮಕ್ಕಳಿಗೆ ಮರೆವಿನ ಸಮಸ್ಯೆ ಕಾಡುತ್ತದೆ. ಎಷ್ಟು ಓದಿದ್ರೂ ನೆನಪಿರೋದಿಲ್ಲ. ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಸಾಧ್ಯವಾಗುವುದಿಲ್ಲ. ಓದಿನ ಬಗ್ಗೆ ಗಮನ ನೀಡಲು ಸಾಧ್ಯವಾಗುವುದಿಲ್ಲ. ಅಂತ ಮಕ್ಕಳ ಪಾಲಕರು ಈ ಬಗ್ಗೆ ಚಿಂತೆ ಮಾಡುವ ಅಗತ್ಯವಿಲ್ಲ. ನಿಮ್ಮೆಲ್ಲ ಸಮಸ್ಯೆಗೆ ಗಣೇಶ ರುದ್ರಾಕ್ಷಿ ಸುಲಭ ಪರಿಹಾರ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬುಧಗ್ರಹ ಅನುಕೂಲಕರವಾಗಿರುವುದು ಬಹಳ ಮುಖ್ಯ. ಜಾತಕದಲ್ಲಿ ಬುಧಗ್ರಹ ಅನುಕೂಲಕರವಾಗಿದ್ದರೆ ಮಕ್ಕಳು ಸ್ವಲ್ಪ ಓದಿದ್ರೂ ಹೆಚ್ಚು ಅಂಕ ಗಳಿಸುತ್ತಾರೆ. ಬುದ್ಧಿವಂತ ಎನ್ನಿಸಿಕೊಳ್ಳುತ್ತಾರೆ.

ಗಣೇಶ ರುದ್ರಾಕ್ಷಿ ಮಾಲೆಯನ್ನು ಧರಿಸಿದ್ರೆ ಬುಧಗ್ರಹ ಅನುಕೂಲಕರ ಫಲ ನೀಡುತ್ತದೆ. ಇದ್ರಿಂದ ಏಕಾಗ್ರತೆ ವೃದ್ಧಿಯಾಗುತ್ತದೆ. ಸ್ಮರಣ ಶಕ್ತಿ ಹೆಚ್ಚಾಗುತ್ತದೆ. ಬರವಣಿಗೆ ಶಕ್ತಿಯಲ್ಲೂ ವೃದ್ಧಿಯಾಗುತ್ತದೆ. ಇದ್ರಿಂದಾಗಿ ಸಾಮಾನ್ಯ ಬುದ್ಧಿವಂತ ವಿದ್ಯಾರ್ಥಿ ಕೂಡ ಪರೀಕ್ಷೆಯಲ್ಲಿ  ಹೆಚ್ಚಿನ ಅಂಕ ಪಡೆಯುತ್ತಾನೆ.

ಗಣೇಶ ರುದ್ರಾಕ್ಷಿ ಧರಿಸುವ ಮೊದಲು ಹಸುವಿನ ಹಾಲು ಅಥವಾ ಗೋ ಮೂತ್ರದಿಂದ ರುದ್ರಾಕ್ಷಿಯನ್ನು ಸ್ವಚ್ಛಗೊಳಿಸಬೇಕು. ನಂತ್ರ ಪೂಜೆ ಮಾಡಬೇಕು. ಗಣೇಶ ರುದ್ರಾಕ್ಷಿಯನ್ನು ಹಸಿರು ಬಣ್ಣದ ದಾರದಲ್ಲಿ ಪೊಣಿಸಿ ಹಾಕಿಕೊಳ್ಳಬೇಕು. ಯಾವ ತಿಂಗಳಲ್ಲಿಯಾದ್ರೂ ಸರಿ ಶುಕ್ಷ ಪಕ್ಷದಲ್ಲಿ ಸರಸ್ವತಿ ಯೋಗ ಬಂದ ಬುಧವಾರ ರುದ್ರಾಕ್ಷಿ ಧರಿಸಬೇಕು.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read