ಮಕ್ಕಳಿಗೆ ʼಹಣ್ಣುʼ ಹಾಗೇ ಸೇವಿಸಲು ಬೇಸರವೇ….? ಈ ರೀತಿ ಸವಿಯಲು ಕೊಡಿ

ಹಣ್ಣುಗಳು ಆರೋಗ್ಯಕ್ಕೆ ಉತ್ತಮ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಅವುಗಳನ್ನು ಸರಿಯಾದ ಕ್ರಮದಲ್ಲಿ ತಿಂದರೆ ಅದರಿಂದ ಮತ್ತಷ್ಟು ಪ್ರಯೋಜನ ಪಡೆಯಬಹುದು.

ಆದ್ದರಿಂದ ಯಾವ ಹಣ್ಣನ್ನು ಯಾವ ರೀತಿ ತಿಂದರೆ ಉತ್ತಮ ಎಂಬುದನ್ನು ತಿಳಿಯಿರಿ.

* ಹೊಟ್ಟೆಯಲ್ಲಿ ಸಂಕಟವಾದಾಗ ಕಲ್ಲಂಗಡಿ ಹಣ್ಣು, ಕರ್ಬೂಜ, ಬಾಳೆ ಹಣ್ಣು,  ದಾಳಿಂಬೆ ಮುಂತಾದ ತಂಪು ಹಣ್ಣುಗಳನ್ನು ಸೇವಿಸಿದರೆ ಮನಸ್ಸು ಶಾಂತವಾಗುತ್ತದೆ.

* ಹಣ್ಣುಗಳನ್ನು ದ್ರವ ರೂಪದಲ್ಲಿ ಸೇವಿಸುವ ಬದಲು ಅದು ಇರುವ ರೂಪದಲ್ಲಿಯೇ ಸೇವಿಸಿದರೆ ಉತ್ತಮ.

* ಬೇಸಿಗೆಯಲ್ಲಿ ಐಸ್‌ ಕ್ಯೂಬ್‌ಗಳ ಮೇಲೆ ಹಣ್ಣಿನ ಹೋಳುಗಳನ್ನು ಹರಿಡಿಸಿಟ್ಟು ತಿಂದರೆ ತಂಪಾಗಿರುತ್ತದೆ.

* ದಾಳಿಂಬೆ, ಕಲ್ಲಂಗಡಿ, ನೇರಳೆ ಮುಂತಾದ ಹಣ್ಣುಗಳಿಗೆ ಉಪ್ಪು ಸವರಿ ತಿಂದರೆ ವಿಶೇಷ ರುಚಿ ಸಿಗುತ್ತದೆ.

* ಪೈನಾಪಲ್‌, ಪೇರಳೆ ಹಣ್ಣುಗಳಿಗೆ ಉಪ್ಪು ಹಾಗೂ ಖಾರ ಪುಡಿ ಉದುರಿಸಿ ತಿಂದರೆ ರುಚಿ ಜಾಸ್ತಿ.

* ಆಯಾ ಕಾಲಕ್ಕೆ ಬರುವ ಹಣ್ಣುಗಳ ಸೇವನೆ ಆರೋಗ್ಯಕ್ಕೆ ತುಂಬಾ ಉತ್ತಮ. ಆದರೆ ಸಕ್ಕರೆ ಕಾಯಿಲೆಯವರಿಗೆ ಎಲ್ಲಾ ಹಣ್ಣುಗಳ ಸೇವನೆ ಸೂಕ್ತವಲ್ಲ. ವೈದ್ಯರು ಸೂಚಿಸಿದ ಹಣ್ಣುಗಳನ್ನು ಮಾತ್ರ ಸೇವಿಸಿದರೆ ಉತ್ತಮ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read