ಇನ್ಸ್ಟಾಗ್ರಾಮ್ ನಲ್ಲಿ ಫಾಲೋವರ್ಸ್ ಹೆಚ್ಚಿಸಿಕೊಳ್ಳಲು ಇಲ್ಲಿದೆ ‌ʼಟಿಪ್ಸ್ʼ

ಈಗ ಜನರ ಫೆವರೆಟ್‌ ಮನರಂಜನೆ ಇನ್ಸ್ಟಾಗ್ರಾಮ್. ಸಮಯ ಸಿಕ್ಕಾಗೆಲ್ಲ ಸ್ಕ್ರೋಲ್‌ ಮಾಡ್ತಾ ಇನ್ಸ್ಟಾ ರೀಲ್ಸ್‌ ನೋಡೋರ ಸಂಖ್ಯೆ ಕೋಟಿಯಲ್ಲಿದೆ. ಇದೇ ಕಾರಣಕ್ಕೆ ಅನೇಕರು ಇನ್ಸ್ಟಾಗ್ರಾಮ್‌ ರೀಲ್ಸ್‌ ಗಳನ್ನೇ ತಮ್ಮ ವೃತ್ತಿ ಮಾಡಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್‌ ಒಬ್ಬರಿಗೆ ಮನರಂಜನೆ ನೀಡಿದ್ರೆ ಮತ್ತೊಬ್ಬರಿಗೆ ಗಳಿಕೆಗೆ ಅವಕಾಶ ನೀಡ್ತಿದೆ.

ಇನ್ಸ್ಟಾಗ್ರಾಮ್‌ ನಲ್ಲಿ ಫಾಲೋವರ್ಸ್‌ ಹೆಚ್ಚಾದಂತೆ, ವಿಡಿಯೋಕ್ಕೆ ಹೆಚ್ಚಿನ ವ್ಯೂವ್ಸ್‌ ಸಿಕ್ತಿದ್ದಂತೆ ಗಳಿಕೆ ಶುರುವಾಗುತ್ತದೆ. ಕೆಲವರ ಇನ್ಸ್ಟಾ ವಿಡಿಯೋದಲ್ಲಿ ಲಕ್ಷಗಟ್ಟಲೆ ಲೈಕ್ಸ್‌ ನೀವು ನೋಡ್ಬಹುದು. ಅದೇ ನೀವು ಮಾಡಿದ ಒಂದು ವಿಡಿಯೋಕ್ಕೆ ನಾಲ್ಕು ಲೈಕ್ಸ್‌, ಹದಿನೈದು ವ್ಯೂವ್ಸ್‌ ಸಿಗೋದು ಕಷ್ಟ ಎನ್ನುವ ಸ್ಥಿತಿ ಇರುತ್ತದೆ.

ಒಂದೆರಡು ವಿಡಿಯೋ ಮಾಡಿ, ಲೈಕ್ಸ್‌, ವ್ಯೂವ್ಸ್‌ ಸಿಕ್ಕಿಲ್ಲ ಎಂದಾಗ ಜನರು ಅದರಿಂದ ಬೇಸರಗೊಂಡು ವಿಡಿಯೋ ಮಾಡೋದನ್ನು ಬಿಡ್ತಾರೆ. ನೀವೂ ಇನ್ಸ್ಟಾದಲ್ಲಿ ಹೆಚ್ಚು ಫಾಲೋವರ್ಸ್‌ ಹಾಗೂ ಲೈಕ್ಸ್‌ ಪಡೆಯಬೇಕು ಅಂದ್ರೆ ಕೆಲವೊಂದು ಟ್ರಿಕ್ಸ್‌ ಫಾಲೋ ಮಾಡಬೇಕು.

ಮೊದಲೇ ಹೇಳಿದಂತೆ ಇನ್ಸ್ಟಾಗ್ರಾಮ್‌ ನಲ್ಲಿ ಒಂದೆರಡು ವಿಡಿಯೋ ಹಾಕಿ ಸುಮ್ಮನಾದ್ರೆ ಸಾಲೋದಿಲ್ಲ. ತಿಂಗಳಿಗೊಂದು ವಿಡಿಯೋ ಪೋಸ್ಟ್‌ ಮಾಡಿದರೂ ನೀವು ಫಾಲೋವರ್ಸ್‌ ಪಡೆಯಲು ಸಾಧ್ಯವಿಲ್ಲ. ನೀವು ನಿತ್ಯ ಒಂದಾದ್ರೂ ವಿಡಿಯೋವನ್ನು ಪೋಸ್ಟ್‌ ಮಾಡಬೇಕು. ಅದಕ್ಕೆ ವ್ಯೂವ್ಸ್‌, ಲೈಕ್ಸ್‌ ಸಿಗಲಿ ಬಿಡಲಿ ನೀವು ವಿಡಿಯೋ ಅಪ್ಲೋಡ್‌ ಮಾಡೋದನ್ನು ಬಿಡಬೇಡಿ.

ಆಸಕ್ತಿ ವಿಷ್ಯಯಗಳನ್ನು ಪತ್ತೆ ಮಾಡಿ, ಅದ್ರ ಮೇಲೆ ವಿಡಿಯೋ ಮಾಡೋದು ಮುಖ್ಯ. ಸಾರ್ವಜನಿಕರ ಮೇಲೆ ನೇರವಾಗಿ ಪ್ರಭಾವ ಬೀರುವ ಮಾರುಕಟ್ಟೆ, ಆಹಾರ, ವಸ್ತ್ರ, ಮಳಿಗೆ ಸೇರಿದಂತೆ ನೀವು ನಿಮ್ಮಿಷ್ಟ್ದ ಹಾಗೂ ಆಸಕ್ತಿಯ ವಿಷ್ಯಗಳನ್ನು ಆಯ್ದುಕೊಳ್ಳಬೇಕು.

ಟ್ರೆಂಡಿಂಗ್‌ ಆಡಿಯೋ ಹಾಗೂ ವಿಡಿಯೋ ಬಳಸಿಕೊಂಡು ನೀವು ವಿಡಿಯೋ ಮಾಡಿದ್ರೆ ಅತಿ ಶೀಘ್ರದಲ್ಲಿ ಅದು ವೈರಲ್‌ ಆಗುತ್ತದೆ. ನೀವು ವಿಡಿಯೋಕ್ಕೆ ಹಾಕುವ ಹ್ಯಾಶ್‌ಟ್ಯಾಗ್‌ ಕೂಡ ಬಹಳ ಮುಖ್ಯ. ಅಲ್ಲದೆ ರಿಮಿಕ್ಸ್‌ ಆಯ್ಕೆಯನ್ನು ನೀವು ಸಕ್ರಿಯಗೊಳಿಸಿದಾಗ ಇದು ಕೂಡ ನಿಮ್ಮ ವಿವ್ಯೂ ಮತ್ತು ಫಾಲೋವರ್ಸ್‌ ಹೆಚ್ಚಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read