ʼಮಧುಮೇಹʼ ಕಾಡುತ್ತಿದೆಯೇ…..? ಹೀಗೆ ತಿಳಿದುಕೊಳ್ಳಿ

ಮಧುಮೇಹ ಸಮಸ್ಯೆ ವಯಸ್ಸು ಐವತ್ತಾದ ಬಳಿಕವೇ ಕಾಡಬೇಕೆಂದಿಲ್ಲ. ಅದೀಗ ಇಪ್ಪತ್ತರ ಹರೆಯದಲ್ಲೂ ನಿಮ್ಮ ಮೇಲೆ ದಾಳಿ ಮಾಡಬಹುದು. ಅದನ್ನು ತಿಳಿದುಕೊಳ್ಳುವ ಬಗೆ ಹೇಗೆ ಎಂಬುದನ್ನು ನೋಡೋಣ.

ದೇಹದಲ್ಲಿ ಸಕ್ಕರೆ ಅಂಶ ವಿಪರೀತ ಹೆಚ್ಚುವುದೇ ಮಧುಮೇಹ. ನಿಮ್ಮ ತ್ವಚೆಯ ಮೇಲೆ ಇದ್ದಕ್ಕಿದ್ದಂತೆ ಕಪ್ಪು ಅಥವಾ ಕಂದು ಬಣ್ಣದ ಕಲೆಗಳು ಕಾಣಿಸಿಕೊಳ್ಳಬಹುದು. ಇದು ಬಹುಕಾಲ ದೂರವಾಗದೆ ಉಳಿದರೆ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ಇದು ಮಧುಮೇಹದ ಲಕ್ಷಣವಿರಬಹುದು.

ಕೈಕಾಲುಗಳ ಮೇಲೆ ಗುಳ್ಳೆ ಮೂಡಿ ವಿಪರೀತ ತುರಿಕೆಗೆ ಕಾರಣವಾಗಬಹುದು. ತ್ವಚೆ ಸಂಪೂರ್ಣ ಒಣಗಿದಂತಾಗಿ ಆಕರ್ಷಣೆ ಕಳೆದುಕೊಳ್ಳಬಹುದು.

ದೇಹದ ಯಾವುದೇ ಭಾಗದಲ್ಲಿ ಗಾಯಗಳಾದರೆ ಒಣಗದೆ ಹಾಗೆಯೇ ಉಳಿಯಬಹುದು. ಅಥವಾ ಗಾಯದ ತೀವ್ರತೆ ಹೆಚ್ಚುತ್ತಾ ಹೋಗಿ ಸಮಸ್ಯೆಯಾಗಿ ಕಾಡಬಹುದು. ಇಂಥ ಲಕ್ಷಣಗಳು ಕಂಡು ಬಂದಾಗ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಇನ್ಸುಲಿನ್ ತೆಗೆದುಕೊಳ್ಳುವ ಮೂಲಕ ನಿಮ್ಮ ಹಲವು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read