ʼಸಕ್ಕರೆ ಕಾಯಿಲೆʼಯಿಂದ ಬಳಲುತ್ತಿದ್ದೀರಾ……? ಸಿಹಿ ತಿನ್ನುವ ಬಯಕೆಯಾದರೆ ಹೀಗೆ ಮಾಡಿ

ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ಅದೆಷ್ಟೋ ಮಂದಿ ಸಿಹಿ ತಿನಿಸುಗಳ ಸೇವನೆಯನ್ನು ಸಂಪೂರ್ಣವಾಗಿ ನಿಲ್ಲಿಸಿಬಿಡುತ್ತಾರೆ. ಪ್ರತಿಯೊಬ್ಬರಲ್ಲೂ ಸಿಹಿ ತಿಂಡಿಗಳನ್ನು ತಿನ್ನಬೇಕೆಂಬ ಬಯಕೆ ಸಹಜ. ಆದ್ರೆ ಮಧುಮೇಹ ಇದ್ದವರು ಸಿಹಿ ತಿಂದರೆ ಸಮಸ್ಯೆ ಮತ್ತಷ್ಟು ಉಲ್ಬಣವಾಗಬಹುದು. ಹಾಗಾಗಿಯೇ ರೋಗಿಗಳು ಸ್ವೀಟ್‌ ತಿನ್ನಲು ಭಯಪಡ್ತಾರೆ.

ಆದ್ರೆ ಸಿಹಿ ತಿನ್ನಬೇಕು ಎಂಬ ನಿಮ್ಮ ಆಸೆಯನ್ನು ಹತ್ತಿಕ್ಕುವ ಅವಶ್ಯಕತೆಯಿಲ್ಲ. ಸಕ್ಕರೆ ಕಾಯಿಲೆ ಇರುವವರು ಕೂಡ ಕೆಲವೊಂದು ಸಿಹಿಯನ್ನು ಸೇವನೆ ಮಾಡಬಹುದು. ಅವು ಯಾವುವು ಅನ್ನೋದನ್ನು ನೀವು ತಿಳಿದುಕೊಳ್ಳಬೇಕು. ಜೊತೆಗೆ ಸೇವನೆಗೂ ಮುನ್ನ ಕೆಲವೊಂದು ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಶುಗರ್ ಲೆವೆಲ್ ಅನ್ನು ನಿಯಂತ್ರಣದಲ್ಲಿಟ್ಟು ನಿಮ್ಮನ್ನು ಆರೋಗ್ಯವಾಗಿಡುವಂತಹ ಸಿಹಿ ಪದಾರ್ಥಗಳನ್ನು ನೀವು ಆಯ್ಕೆ ಮಾಡಿಕೊಳ್ಳಬೇಕು. ಅವುಗಳಲ್ಲಿ ಪ್ರಮುಖವಾದದ್ದೆಂದರೆ ಹಣ್ಣುಗಳು. ಸಕ್ಕರೆ ಕಾಯಿಲೆ ಇರುವವರು ಬಹುತೇಕ ಎಲ್ಲಾ ಹಣ್ಣುಗಳನ್ನೂ ತಿನ್ನಬಹುದು. ಆದರೆ ಮಿತವಾಗಿ ತಿಂದರೆ ಉತ್ತಮ. ಇದು ಸಿಹಿ ತಿನ್ನಬೇಕೆಂಬ ನಿಮ್ಮ ಆಸೆಯನ್ನು ಈಡೇರಿಸುತ್ತದೆ. ಹಣ್ಣುಗಳ ಸೇವನೆಯಿಂದ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಸಹ ಪಡೆಯುತ್ತೀರಿ.

ಹಣ್ಣಿನ ಸಲಾಡ್ ಮಾಡಿಕೊಳ್ಳಿ, ಆದ್ರೆ ನೀವು ತಿನ್ನುವ ಪ್ರಮಾಣ ಒಂದು ಹಣ್ಣಿಗಿಂತ ಹೆಚ್ಚಿರಬಾರದು. ಮಧುಮೇಹ ಸಮಸ್ಯೆ ಇದ್ದವರು ಸ್ಮೂಥಿಗಳನ್ನು ಮಾಡಿ ಕುಡಿಯಬಹುದು. ಹಣ್ಣು ಹಾಗೂ ಡ್ರೈಫ್ರೂಟ್ಸ್‌ ಸ್ಮೂಥಿ ರುಚಿಯಾಗಿರುತ್ತದೆ. ಆದ್ರೆ ಇದಕ್ಕೆ ಅಪ್ಪಿತಪ್ಪಿಯೂ ಸಕ್ಕರೆ ಸೇರಿಸಬೇಡಿ.

ಇದಲ್ಲದೆ ಸಕ್ಕರೆ ಕಾಯಿಲೆ ಇರುವವರು ಬೆಳಗಿನ ಉಪಹಾರದ ಬದಲಿಗೆ ಬಾದಾಮಿ ಅಥವಾ ಕ್ಯಾರೆಟ್ ಫುಡ್ಡಿಂಗ್‌ ಅನ್ನು ಸೇವಿಸಬಹುದು. ಈ ಹಲ್ವಾ ತಯಾರಿಸುವಾಗ ಸಕ್ಕರೆಯ ಬದಲು ಶುಗರ್‌ ಫ್ರೀ ಸೇರಿಸಿಕೊಳ್ಳಿ. ಹೀಗೆ ಮಾಡಿದರೆ ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗುವುದಿಲ್ಲ.

ಮಧುಮೇಹ ರೋಗಿಗಳಿಗೆ ಡಾರ್ಕ್ ಚಾಕೊಲೇಟ್ ಸಹ ಒಳ್ಳೆಯ ಆಪ್ಷನ್‌. ಇದರಲ್ಲಿ ಇತರ ಚಾಕಲೇಟ್‌ಗಳಿಗಿಂತ ಕಡಿಮೆ ಸಕ್ಕರೆ ಇರುತ್ತದೆ. ಹಾಗಾಗಿ ಸಕ್ಕರೆ ಕಾಯಿಲೆ ಇರುವವರ ಮೇಲೆ ಕೆಟ್ಟ ಪರಿಣಾಮ ಬೀರುವುದಿಲ್ಲ. ಹಾಗಂತ ದೊಡ್ಡ ಚಾಕಲೇಟ್‌ ಬಾರ್‌ ಅನ್ನೇ ಪೂರ್ತಿ ಖಾಲಿ ಮಾಡಿಬಿಡಬೇಡಿ. ಕೇವಲ 2 ಪೀಸ್‌ಗಳನ್ನು ಮಾತ್ರ ತಿನ್ನುವುದು ಸೂಕ್ತ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read