ʼಖಿನ್ನತೆʼ ಸಮಸ್ಯೆಯಿಂದ ಬಳಲುತ್ತಿದ್ದೀರಾ……? ಸಮಸ್ಯೆಯಿಂದ ಪಾರಾಗಲು ಇಲ್ಲಿದೆ ಸಲಹೆ

ಕೆಲವೊಮ್ಮೆ ಇದ್ದಕ್ಕಿದ್ದ ಹಾಗೇ ಬೇಸರ ಆವರಿಸಿಕೊಳ್ಳುತ್ತದೆ ಅಥವಾ ಸಡನ್ನಾಗಿ ಅಳು ಒತ್ತರಿಸಿಕೊಂಡು ಬಂದು ಬಿಡುತ್ತದೆ. ಮಾನಸಿಕ ಕಿರಿಕಿರಿ, ಕೆಲಸದ ಒತ್ತಡ, ಆರ್ಥಿಕ ಪರಿಸ್ಥಿತಿ, ಆರೋಗ್ಯದ ಸಮಸ್ಯೆ ಇವೆಲ್ಲವೂ ಇದಕ್ಕೆ ಕಾರಣವಾಗಬಹುದು. ಇಂತಹ ಪರಿಸ್ಥಿತಿಗಳು ಕೆಲವೊಮ್ಮೆ ಖಿನ್ನತೆಗೆ ನಮ್ಮನ್ನು ದೂಡುತ್ತದೆ. ಹಾಗಿದ್ರೆ ಇದನ್ನು ಎದುರಿಸುವ ಬಗೆ ಹೇಗೆ…?

ನೋವು, ಒತ್ತಡ, ಕಿರಿಕಿರಿ ಯಾರನ್ನೂ ಬಿಡಲ್ಲ. ಆದರೆ ಆ ಪರಿಸ್ಥಿತಿಗಳು ಬಂದಾಗ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದು ಮುಖ್ಯವಾಗುತ್ತದೆ. ಜೋರಾಗಿ ಅಳಬೇಕು ಅನಿಸಿದಾಗ ಅತ್ತು ಬಿಡಬೇಕು. ದುಃಖವನ್ನು ನಿಯಂತ್ರಿಸಿದಷ್ಟು ನೆಮ್ಮದಿ ಹಾಳು.

ಇನ್ನು ತುಂಬಾ ಒಂಟಿ ಅನಿಸಿದಾಗ ಸಾಧ್ಯವಾದಷ್ಟು ಜನರಿರುವ ಕಡೆ ಹೋಗಿ ಕುಳಿತುಕೊಳ್ಳಬೇಕು. ಅಥವಾ ಯಾರೊಂದಿಗಾದರೂ ನಿಮ್ಮ ಮನಸ್ಸು ಬಿಚ್ಚಿ ಮಾತನಾಡಿಬಿಡಬೇಕು. ಆಗ ಮನಸ್ಸು ಹಗುರವಾಗುತ್ತದೆ.

 ಮನೆಯಲ್ಲಿ ಆದಷ್ಟು ಹಿತಕರವಾದ ಮ್ಯೂಸಿಕ್ ಹಾಕಿಕೊಳ್ಳುವುದು, ದೇವರ ನಾಮ ಸ್ಮರಣೆ ಮಾಡುವುದನ್ನು ಮಾಡಬೇಕು. ಅಥವಾ ನಿಮ್ಮ ಮನಸ್ಸಿಗೆ ಖುಷಿ ನೀಡುವ ಕೆಲಸದಲ್ಲಿ ಮಗ್ನರಾಗಿಬಿಡಬೇಕು. ಆಗ ಆ ಪರಿಸ್ಥಿತಿಗಳಿಂದ ಪಾರಾಗಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read