ʼಕ್ರೆಡಿಟ್ ಕಾರ್ಡ್ʼ ಖರ್ಚನ್ನು ಹೇಗೆ ಕಡಿಮೆ ಮಾಡೋದು ಗೊತ್ತಾ….? ಇಲ್ಲಿದೆ ಟಿಪ್ಸ್

ಅಗತ್ಯ ಸಂದರ್ಭದಲ್ಲಿ ಕ್ರೆಡಿಟ್ ಕಾರ್ಡ್‌ ಉತ್ತಮ ಹಣಕಾಸಿನ ಸಾಧನವಾಗಿದೆ. ಸುಲಭವಾಗಿ ಸಿಗುವ ಹಾಗೂ ಆರಾಮವಾಗಿ ಶಾಪಿಂಗ್ ಮಾಡಲು ಸಾಧ್ಯವಾಗುವ ಈ ಕ್ರೆಡಿಟ್ ಕಾರ್ಡ್ ಗಳನ್ನು ಬುದ್ದಿವಂತಿಕೆಯಿಂದ ಬಳಸಬೇಕು. ಮಿತಿ ಮೀರಿ ಕ್ರೆಡಿಟ್ ಕಾರ್ಡ್ ಬಳಸಿದ್ರೆ ಆರ್ಥಿಕ ಸಂಕಷ್ಟ ಕಡಿಮೆಯಾಗುವ ಬದಲು ಹೆಚ್ಚಾಗುತ್ತದೆ. ಹಾಗಾಗಿ ತುರ್ತು ಅಗತ್ಯವನ್ನು ಪೂರೈಸುವ ಕ್ರೆಡಿಟ್ ಕಾರ್ಡ್ ಬಳಸುವಾಗ ಕೆಲವೊಂದು ತಪ್ಪುಗಳನ್ನು ಮಾಡಬಾರದು.

ಈಗಾಗಲೇ ಕ್ರೆಡಿಟ್ ಕಾರ್ಡ್ ಮೂಲಕ ಸಾಲ ತೆಗೆದುಕೊಂಡಿದ್ದರೆ ಸಾಲ ಮರುಪಾವತಿಸುವವರೆಗೆ ಮತ್ತೆ ಸಾಲ ಪಡೆಯಬೇಡಿ. ಸಾಲದ ಮಿತಿ ಮೀರಿದ್ದರೆ ಹೆಚ್ಚು ಬಡ್ಡಿ ಪಾವತಿಸಬೇಕಾಗುತ್ತದೆ. ಬಡ್ಡಿ ಹೆಚ್ಚಾಗದಂತೆ ನೋಡಿಕೊಳ್ಳಬೇಕೆಂದ್ರೆ ಸಮಯಕ್ಕೆ ಸರಿಯಾಗಿ ಸಾಲವನ್ನು ಮರುಪಾವತಿಸಿ.

ಕ್ರೆಡಿಟ್ ಕಾರ್ಡ್ ನಿಂದ ಹಣ ಪಡೆಯುವ ಹವ್ಯಾಸವಿದ್ದರೆ ಅದನ್ನು ಬಿಟ್ಟುಬಿಡಿ. ಹಣ ಪಡೆದ ದಿನದಿಂದ ಹಿಡಿದು ಹಣ ಮರುಪಾವತಿಯವರೆಗೆ ಮುಂಗಡ ಹಿಂತೆಗೆದುಕೊಳ್ಳುವ ಶುಲ್ಕ ವಿಧಿಸಲಾಗುತ್ತದೆ. ಅದು ಶೇಕಡಾ 2.5ರಿಂದ 3.5ರಷ್ಟಿರುತ್ತದೆ. ಹಾಗಾಗಿ ಕ್ರೆಡಿಟ್ ಕಾರ್ಡ್ ನಿಂದ ಹಣ ಹಿಂಪಡೆಯಬಾರದು. ಕ್ರೆಡಿಟ್ ಕಾರ್ಡ್ ಮೇಲೆ ಈಗಾಗಲೇ ಸಾಲವಿದ್ರೆ ಹಣ ಹಿಂಪಡೆಯುವ ಸಾಹಸ ಮಾಡಬಾರದು.

ಬಾಕಿ ಇರುವ ಹಣವನ್ನು ಮರುಪಾವತಿ ಮಾಡದೆ ಕ್ರೆಡಿಟ್ ಕಾರ್ಡ್ ರದ್ದು ಮಾಡಬಾರದು. ಹೀಗೆ ಮಾಡಿದಲ್ಲಿ ಎರಡು ರೀತಿಯ ನಷ್ಟವಾಗುತ್ತದೆ. ಲಭ್ಯವಿರುವ ಕ್ರೆಡಿಟ್ ಕಡಿಮೆಯಾಗುತ್ತದೆ. ಕ್ರೆಡಿಟ್ ಸ್ಕೋರ್ ಋಣಾತ್ಮಕ ಪರಿಣಾಮ ಬೀರುತ್ತದೆ. ರದ್ದಾದ ಕ್ರೆಡಿಟ್ ಕಾರ್ಡ್‌ನ ವಯಸ್ಸು ಎಲ್ಲಾ ಕ್ರೆಡಿಟ್ ಲೈನ್‌ಗಳ ಒಟ್ಟು ವಯಸ್ಸನ್ನು ಕಡಿಮೆ ಮಾಡುತ್ತದೆ. ಇದು ಕ್ರೆಡಿಟ್ ಸ್ಕೋರ್‌ನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಕ್ರೆಡಿಟ್ ಕಾರ್ಡ್ ಸಾಲದ ಹೊಣೆಯಿಂದ ತಪ್ಪಿಸಿಕೊಳ್ಳುವ ವಿಧಾನ ತಿಳಿದಿರಬೇಕು. ಪ್ರತಿ ತಿಂಗಳು ನಿಗದಿತ ಪ್ರಮಾಣದಲ್ಲಿ ಹಣ ಪಾವತಿ ಮಾಡಬೇಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read