ನವದೆಹಲಿ: ಕಾರು ಖರೀದಿಸುವುದು ಮಧ್ಯಮ ವರ್ಗದ ಜನತೆಯ ಕನಸು. ದುಬಾರಿ ದುನಿಯಾದಲ್ಲಿ 5-10 ಲಕ್ಷ ಹಣ ಹಾಕಿ ಹೊಸ ಕಾರು ಖರೀದಿಸಿ ಅದನ್ನ ನೋಡಿಕೊಳ್ಳವುದು ಮಿಡಲ್ ಕ್ಲಾಸ್ ಜನರಿಗೆ ಭಾರಿ ಹೊರೆಯಾಗುತ್ತದೆ. ಅದಕ್ಕೆ ಅವರು ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಮಾಡುತ್ತಾರೆ.
* ಕಡಿಮೆ ರೇಟಿಗೆ ಸೆಕೆಂಡ್ ಹ್ಯಾಂಡ್ ಕಾರು ಸಿಗುತ್ತೆ ಅಂತ ಖರೀದಿಸಲು ಹೋಗುವ ಮುನ್ನ ನೀವು ಹುಷಾರಾಗಿರಬೇಕು. ಕಾರಿನ ದಾಖಲೆ ಸರಿ ಉಂಟಾ..? ಯಾರ ಹೆಸರಿನಲ್ಲಿದೆ..? ಎಲ್ಲಿ ರಿಜಿಸ್ಟ್ರೇಷನ್ ಆಗಿದೆ ಎಂಬುದನ್ನು ನೀವು ಚೆಕ್ ಮಾಡಿಕೊಳ್ಳಬೇಕು.
*ಹಳೆಯ ಕಾರುಗಳ ನಿರ್ವಹಣೆಗೆ ಹೆಚ್ಚು ವೆಚ್ಚವಾಗುತ್ತದೆ. ಇದು ಅವರ ದೊಡ್ಡ ಸಮಸ್ಯೆಯಾಗಿದೆ. ಏಕೆಂದರೆ, ಕಾರಿನ ಬಿಡಿಭಾಗಗಳು ಹಳೆಯದಾಗುತ್ತಿದ್ದಂತೆ, ನಿರ್ವಹಣಾ ವೆಚ್ಚವೂ ಹೆಚ್ಚಾಗುತ್ತದೆ.
*ಹಿಂದಿನ ಮಾಲೀಕರು ಸರಿಯಾಗಿ ನಿರ್ವಹಣೆ ಮಾಡದ, ಕಡಿಮೆ ಮೈಲೇಜ್ ನೀಡುವ ಕಾರನ್ನು ನೀವು ಖರೀದಿಸಿದ್ದರೆ, ಇದು ನಿಮಗೆ ಸಮಸ್ಯೆಯಾಗಬಹುದು.
*ಹಳೆಯ ಕಾರು ಖರೀದಿಸುವ ಮುನ್ನ, ಅದರ ಸಾಮರ್ಥ್ಯ, ಮೈಲೆಜ್, ಅದರ ಬಿಡಿ ಭಾಗಗಳು ಮಾರುಕಟ್ಟೆಯಲ್ಲಿ ದೊರಕುತ್ತದೆಯೇ ಎಂಬುದನ್ನ ಚೆಕ್ ಮಾಡಿಕೊಳ್ಳಿ.
*ಕಾರಿನ ಕಂಡೀಷನ್ ಹೇಗಿದೆ..? ಅದು ಎಷ್ಟು ದೂರ ಚಲಿಸಿದೆ ಎಂಬುದನ್ನು ಮೊದಲು ತಿಳಿದುಕೊಳ್ಳಿ.
ಕಾರಿನ ದಾಖಲೆ ಸರಿ ಉಂಟಾ..? ಯಾರ ಹೆಸರಿನಲ್ಲಿದೆ..? ಎಲ್ಲಿ ರಿಜಿಸ್ಟ್ರೇಷನ್ ಆಗಿದೆ ಎಂಬುದನ್ನು ನೀವು ಚೆಕ್ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಯಾರೋ ಮಾಡಿದ ತಪ್ಪಿಗೆ ನೀವು ತೊಂದರೆ ಅನುಭವಿಸಬೇಕಾದೀತು.
ಹಳೆಯ ವಾಹನಗಳ FC ದರ ಕೂಡ ಹೆಚ್ಚಳ
*ಕೇಂದ್ರ ಸಾರಿಗೆ ಇಲಾಖೆ ಮಾಳಿನ್ಯ ನಿಯಂತ್ರಣ ಉದ್ದೇಶದಿಂದ ಹಳೆಯ ವಾಹನಗಳ ಬಳಕೆ ತಡೆಯಲು ಮುಂದಾಗಿದ್ದು, 10 ವರ್ಷಕ್ಕಿಂತಲೂ ಅಧಿಕ ಹಳೆ ವಾಹನಗಳ ಮೇಲಿನ ಫಿಟ್ನೆಸ್ ದೃಢೀಕರಣ ಪತ್ರ(ಎಫ್.ಸಿ.) ನವೀಕರಣ ಶುಲ್ಕವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಳ ಮಾಡಿದೆ.10 ರಿಂದ 15 ವರ್ಷ, 15 ರಿಂದ 20 ವರ್ಷ ಮತ್ತು 20 ವರ್ಷಕ್ಕಿಂತ ಹಳೆಯ ವಾಹನಗಳೆಂದು ಮೂರು ಸ್ಲ್ಯಾಬ್ ಮಾಡಲಾಗಿದೆ. ಇದಕ್ಕೆ ಪ್ರತ್ಯೇಕ ದರ ನಿಗದಿಪಡಿಸಲಾಗಿದೆ.
20 ವರ್ಷಗಳಿಂದ ಹಳೆಯ ಲಘು ಮೋಟಾರ್ ವಾಹನಗಳಿಗೆ(ಎಲ್.ಎಂ.ವಿ.) ಎಫ್.ಸಿ. ನವೀಕರಣ ಶುಲ್ಕವನ್ನು 10,000 ರೂ. ನಿಂದ 15000 ರೂ.ಗೆ ಹೆಚ್ಚಳ ಮಾಡಲಾಗಿದೆ.
*ಮಧ್ಯಮ ಗಾತ್ರದ ವಾಣಿಜ್ಯ ವಾಹನಗಳ ಶುಲ್ಕವನ್ನು 15,000 ರೂ.ನಿಂದ 20,000 ರೂ.ಗೆ ಹೆಚ್ಚಳ ಮಾಡಲಾಗಿದೆ.20 ವರ್ಷಕ್ಕಿಂತ ಹಳೆಯ ದ್ವಿಚಕ್ರ ವಾಹನಗಳ ಎಫ್.ಸಿ. ನವೀಕರಣ ಶುಲ್ಕವನ್ನು 600 ರೂ.ನಿಂದ 2000 ರೂ.ಗೆ ಹೆಚ್ಚಳ ಮಾಡಲಾಗಿದೆ. 20 ವರ್ಷಗಳಿಗಿಂತ ಹಳೆಯ ಟ್ರಕ್ ಗಳು ಮತ್ತು ಬಸ್ ಗಳ ನವೀಕರಣ ಶುಲ್ಕವನ್ನು 3500 ರೂ. ಗಳಿಂದ 25000 ರೂ.ಗೆ ಹೆಚ್ಚಳ ಮಾಡಲಾಗಿದೆ. ಭಾರಿ ಹಳೇ ಮಾಡೆಲ್ ಕಾರು ಖರೀದಿಸುವ ಮುನ್ನ ನೀವು ಎಚ್ಚರ ವಹಿಸಬೇಕು.
