ಭೂಮಿಯನ್ನು ವೀಕ್ಷಿಸುತ್ತಿವೆಯೇ ಅನ್ಯಗ್ರಹ ಜೀವಿಗಳು ? ಪೆಂಟಗನ್ ಅಧಿಕಾರಿಯಿಂದ ಕುತೂಹಲಕಾರೀ ಮಾಹಿತಿ ಬಹಿರಂಗ

ಅನ್ಯ ವಿಶ್ವದಿಂದ ಬಂದ ನೌಕೆಯೊಂದು ನಮ್ಮ ಸೌರಮಂಡಲದಲ್ಲಿ ಸುತ್ತು ಹಾಕುತ್ತಿದ್ದು, ಅನೇಕ ಆಯಾಮಗಳಿಂದ ಭೂಗ್ರಹವನ್ನು ವೀಕ್ಷಿಸುತ್ತಿದೆ ಎಂದು ಪೆಂಟಗನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅನ್ಯ ಗ್ರಹ ಜೀವಿಗಳ ಅಸ್ಥಿತ್ವದ ವಿಚಾರಗಳು ನಮ್ಮಲ್ಲಿ ಭಾರೀ ಕುತೂಹಲ ಮೂಡಿಸಿದ್ದು, ಆಗ್ಗಾಗ್ಗೆ ವಿಜ್ಞಾನಿಗಳು ಹಾಗೂ ಜನಸಾಮಾನ್ಯರ ನಡುವೆ ಭಾರೀ ಚರ್ಚೆ ಹುಟ್ಟುಹಾಕುತ್ತಲೇ ಇರುತ್ತದೆ.

ಹಾರ್ವಡ್‌ ವಿವಿಯಲ್ಲಿ ಖಗೋಳತಜ್ಞರಾಗಿರುವ ಅವಿ ಲೋಯೆಬ್ ಮತ್ತು ಪೆಂಟಗನ್‌ನ ನಿರ್ದೇಶಕರಲ್ಲಿ ಒಬ್ಬರಾದ ಶಾನ್ ಎಂ ಕರ್ಕ್‌ಪ್ಯಾಟ್ರಿಕ್ ಈ ಕುರಿತು ವಿಶೇಷ ವರದಿಯೊಂದನ್ನು ಬಿಡುಗಡೆ ಮಾಡಿದ್ದಾರೆ. ಅಮೆರಿಕದ ರಕ್ಷಣಾ ಇಲಾಖೆ ಸಹಯೋಗದಲ್ಲಿ ಈ ವರದಿ ಸಿದ್ಧಪಡಿಸಲಾಗಿದ್ದರೂ ಇದಕ್ಕೆ ಅಧಿಕೃತ ಸ್ಥಾನಮಾನ ಸಿಕ್ಕಿಲ್ಲ.

2017 ರಲ್ಲಿ ತಾರೆಗಳ ನಡುವೆ ವಿಶೇಷ ವಸ್ತುವೊಂದು ಹಾದು ಹೋಗಿದ್ದು, ಅದನ್ನು ’ಔಮುಆಮುವಾ’ ಎಂದು ಹೆಸರಿಟ್ಟಿದ್ದರು ಇದೇ ಅವಿ ಲೋಯೆಬ್. ಮೊದಲಿಗೆ ಅದನ್ನು ಧೂಮಕೇತು ಎಂದು ಭಾವಿಸಲಾಗಿತ್ತು. ಆದರೆ ಈ ವಸ್ತುವಿನ ವಿಚಿತ್ರ ರಚನೆಯ ಕಾರಣದಿಂದ ಲೋಯೆಬ್‌ ಅದೊಂದು ಗಗನನೌಕೆ ಎಂದು ಹೇಳಿದ್ದಲ್ಲದೇ ಅದಕ್ಕೆ ’ಔಮುಆಮುವಾ’ ಎಂದು ಹೆಸರಿಟ್ಟಿದ್ದರು.

ಆದರೆ ಈ ಕುರಿತಾಗಿ ಭಾರೀ ಚರ್ಚೆಗಳಾಗಿದ್ದು, ಔಮುಆಮುವಾ ಎಂದು ಹೇಳಲಾಗುವ ವಸ್ತುವಿನ ಹಿಂದಿನ ಪ್ರಾಕೃತಿಕ ಕಾರಣಗಳನ್ನು ಶೋಧಿಸಿ ನೋಡಬಹುದು ಎಂದು ಕೆಲವರು ಅಭಿಪ್ರಾಯ ಪಟ್ಟರೆ, ಮಿಕ್ಕವರು ಲೋಯೆಬ್‌ರ ಈ ಅನ್ಯವಿಶ್ವದ ಸೂತ್ರವನ್ನು ಬೆಂಬಲಿಸಿದ್ದರು.

ಅನ್ಯವಿಶ್ವದ ಜೀವಿಗಳು ಅಥವಾ ಯುಎಫ್‌ಓಗಳು ಗಗನಯಾನಿಗಳ ಕಣ್ಣಿಗೆ ಬೀಳದಂತೆ ಸೌರಮಂಡಲದ ಸುತ್ತ ಗಿರಕಿ ಹೊಡೆಯುತ್ತಿದ್ದು, ಮಂಗಳ, ಭೂಮಿ ಮತ್ತು ಶುಕ್ರ ಗ್ರಹಗಳನ್ನು ಗುರಿಯಾಗಿಸಿ ದಾಳಿ ಮಾಡುವ ಸಾಧ್ಯತೆಗಳಿವೆ ಎಂದು ತಿಳಿಸಿರುವ ಲೋಯೆಬ್‌, ದ್ರವ ರೂಪದ ನೀರಿರುವ ಕಾರಣ ಭೂಮಿಯು ಈ ಅನ್ಯವಿಶ್ವದ ಜೀವಿಗಳಿಗೆ ಭಾರೀ ಕುತೂಹಲ ಮೂಡಿಸಿರಬಹುದು ಎಂದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read