‘ಟ್ಯಾನಿಂಗ್’ ಕಡಿಮೆಯಾಗಲು ಮುಖಕ್ಕೆ ಹಚ್ಚಿ ಪೇರಲೆ ಎಲೆ ಫೇಸ್ ಪ್ಯಾಕ್

ಬೆವರಿನಿಂದಾಗಿ ಚರ್ಮದ ಕೆಲ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದ್ರಿಂದ ರಕ್ಷಣೆ ಪಡೆಯಲು ಜನರು ಅನೇಕ ಮಾರ್ಗಗಳನ್ನು ಹುಡುಕುತ್ತಾರೆ. ನೈಸರ್ಗಿಕ ಮಾರ್ಗದ ಮೂಲಕ ಗಳ್ಳೆ, ಟ್ಯಾನಿಂಗ್ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಪೇರಲೆ ಆರೋಗ್ಯಕ್ಕೆ ಒಳ್ಳೆಯದು ಎಂಬ ವಿಷ್ಯ ಎಲ್ಲರಿಗೂ ತಿಳಿದಿದೆ. ಈ ಪೇರಲೆ ಎಲೆಗಳು ಕೂಡ ಆರೋಗ್ಯ ಮತ್ತು ಚರ್ಮಕ್ಕೆ ಒಳ್ಳೆಯದು.

ಪೇರಲೆ ಎಲೆಗಳು ಅನೇಕ ಔಷಧೀಯ ಗುಣಗಳನ್ನು ಹೊಂದಿವೆ. ಪೇರಲೆ ಎಲೆಗಳು ಚರ್ಮದ ಸೋಂಕು ಮತ್ತು ಸುಟ್ಟ ಗಾಯಗಳನ್ನು ಗುಣಪಡಿಸುತ್ತದೆ. ಪೇರಲೆ ಎಲೆಗಳಿಂದ ತಯಾರಿಸಿದ ಫೇಸ್ ಪ್ಯಾಕ್ ಚರ್ಮದ ಸಮಸ್ಯೆ ಕಡಿಮೆ ಮಾಡುತ್ತದೆ.

ಪೇರಲೆ ಎಲೆಗಳ ಫೇಸ್ ಪ್ಯಾಕ್ ತಯಾರಿಸಲು, ಮೊದಲು ಪೇರಲೆ ಎಲೆಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ನಂತರ ಸ್ವಲ್ಪ ನೀರು ಸೇರಿಸಿ ಪೇಸ್ಟ್ ತಯಾರಿಸಿ. ತಯಾರಾದ ಪೇಸ್ಟ್ ಹಚ್ಚಿಕೊಳ್ಳುವ ಮೊದಲು ಫೇಸ್ ವಾಶ್ ನಿಂದ ಮುಖ ತೊಳೆದುಕೊಳ್ಳಿ.  5 ನಿಮಿಷಗಳ ಕಾಲ ಉಗಿ ತೆಗೆದುಕೊಳ್ಳಬಹುದು.

ನಂತ್ರ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ. ಪೇಸ್ಟ್ ಒಣಗಿದ ನಂತರ, ಮುಖವನ್ನು ತಣ್ಣೀರಿನಿಂದ ಚೆನ್ನಾಗಿ ತೊಳೆಯಿರಿ. ಇದು ಬೇಸಿಗೆಯಲ್ಲಿ ನಿಮ್ಮ ಮುಖಕ್ಕೆ ತಂಪನ್ನು ನೀಡುತ್ತದೆ. ಗುಳ್ಳೆ ಮತ್ತು ಟ್ಯಾನಿಂಗ್ ತೊಡೆದುಹಾಕುತ್ತದೆ. ಪೇರಲೆ ಎಲೆಗಳು ಚರ್ಮವನ್ನು ಸೋಂಕಿನಿಂದ ರಕ್ಷಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read