ಆರೋಗ್ಯ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ

ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಮೇರಿಟ್ ಹಾಗೂ ರೋಸ್ಟರ್ ಆಧಾರದ ಮೇಲೆ ಭರ್ತಿ ಮಾಡಲು ಅರ್ಜಿ  ಆಹ್ವಾನಿಸಲಾಗಿದೆ.

ಒಟ್ಟು 25 ಖಾಲಿ ಇರುವ ಹುದ್ದೆಗಳು ಅನೆಸ್ಥಿಯಾ-02, ಪಾರ್ಮಿಸ್ಟ-1, ಎಂ.ಬಿ.ಬಿ.ಎಸ್ ಮೆಡಿಕಲ್ ಆಪೀಸರ್-5, ಎಂಬಿಬಿಎಸ್ ಮೆಡಿಕಲ್ ಆಫೀಸ್- ನಮ್ಮ ಕ್ಲಿನಿಕ್-15, ಮೈಕ್ರೊಬಯೋಲಜಿಸ್ಟ್-1, ಜಿಲ್ಲಾ ಗುಣಮಟ್ಟ ಖಾತ್ರಿ ಸಲಹೆಗಾರರು-1 ಇದ್ದು, ಮತ್ತು ಎಂಬಿಬಿಎಸ್ ಹಾಗೂ ತಜ್ಞ ವೈದ್ಯರು ಹುದ್ದೆಗಳಿಗೆ ಪ್ರತಿ ಸೋಮವಾರ ಅರ್ಜಿ ಆಹ್ವಾನಿಸಿ ಹುದ್ದೆಗಳನ್ನು ಭರ್ತಿಮಾಡಿಕೊಳ್ಳಲಾಗುವುದು.

ಆಸಕ್ತ ಅಭ್ಯರ್ಥಿಗಳು, ಫೆಬ್ರವರಿ 10, 2025 ರಂದು ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 1:30 ಗಂಟೆಯವರೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಭಾಂಗಣದಲ್ಲಿ  ನೇರ ಸಂದರ್ಶನಕ್ಕೆ ಹಾಜರಾಗಬಹುದು.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆರ್.ಸಿ.ಹೆಚ್ ಕಛೇರಿ ಎನ್.ಹೆಚ್.ಎಮ್ ವಿಭಾಗದಲ್ಲಿ ಕೆಲಸದ ಅವದಿಯಲ್ಲಿ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read