ವಾಲ್ಮೀಕಿ ಸಮುದಾಯದಿಂದ ವಿವಿಧ ಯೋಜನೆಗಳಡಿ ಸಾಲ-ಸೌಲಭ್ಯಗಳಿಗಾಗಿ ಅರ್ಜಿ ಆಹ್ವಾನ

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವತಿಯಿಂದ 2025-26ನೇ ಸಾಲಿನ ವಿವಿಧ ಯೋಜನೆಗಳಡಿ ಸಾಲ-ಸೌಲಭ್ಯಗಳಿಗಾಗಿ ಪರಿಶಿಷ್ಟ ಪಂಗಡದ ಸಮುದಾಯ ಜನಾಂಗದ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತರು ಬೆಂಗಳೂರು ಓನ್, ಕರ್ನಾಟಕ ಓನ್, ಗ್ರಾಮ ಓನ್ ಸೆಂಟರ್ಗಳ ಮೂಲಕ (https://sevasindhuservices.karnataka.gov.in) ಗೆ ಭೇಟಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. 2023-24 ಮತ್ತು 2024-25ನೇ ಸಾಲಿನಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿರುವವರು ಮತ್ತೊಮ್ಮ ಅರ್ಜಿ ಸಲ್ಲಿಸಲು ಅವಶ್ಯಕತೆ ಇರುವುದಿಲ್ಲ. ಅರ್ಜಿ ಸಲ್ಲಿಸಲು ಸೆ.17 ಕೊನೆಯ ದಿನವಾಗಿದೆ.

ಸ್ವಯಂ ಉದ್ಯೋಗ ಯೋಜನೆಗಳು

ನೇರಸಾಲ ಯೋಜನೆ:
ಕಿರು ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಘಟಕವೆಚ್ಚ ರೂ.1 ಲಕ್ಷ, ಇದರಲ್ಲಿ ರೂ.50,000 ಸಹಾಯಧನ ಮತ್ತು ರೂ.50,000 ಸಾಲ.
ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ:
ಹೈನುಗಾರಿಕೆಗಾಗಿ ಘಟಕ ವೆಚ್ಚ ಶೇ.70 ರಷ್ಟು ಗರಿಷ್ಠ ರೂ.1.25 ಲಕ್ಷ ಸಹಾಯಧನ ಮತ್ತು ಉಳಿದ ಬ್ಯಾಂಕ್ ಸಾಲ. ವ್ಯಾಪಾರ ಮತ್ತು ಇತರೆ ಸಣ್ಣ ಉದ್ಯಮಗಳಿಗಾಗಿ ಘಟಕ ವೆಚ್ಚದ ಶೇ.70 ರಷ್ಟು ಗರಿಷ್ಟ ರೂ.2 ಲಕ್ಷ ಸಹಾಯಧನ ಮತ್ತು ಉಳಿದ ಬ್ಯಾಂಕ್ ಸಾಲ.
ಸ್ವಾವಲಂಭಿ ಸಾರಥಿ -ಸರಕು ವಾಹನ/ಟ್ಯಾಕ್ಸಿ ಉದ್ದೇಶಕ್ಕಾಗಿ ಘಟಕ ವೆಚ್ಚದ ಶೇ.75 ರಷ್ಟು ಗರಿಷ್ಟ ರೂ.4 ಲಕ್ಷ ಸಹಾಯಧನ ಮತ್ತು ಉಳಿದ ಬ್ಯಾಂಕ್ ಸಾಲ/ಫಲಾನುಭವಿಯ ವಂತಿಕೆ.
ಮೈಕ್ರೋಕ್ರೆಡಿಟ್ (ಪ್ರೇರಣಾ) ಯೋಜನೆ:
ಮಹಿಳಾ ಸ್ವಸಹಾಯ ಸಂಘದ ಕನಿಷ್ಠ 10 ಜನ ಸದಸ್ಯರಿಗೆ ಸ್ವಯಂ ಉದ್ಯೋಗ ಕಲ್ಪಿಸಲು ಕಿರು ಆರ್ಥಿಕ ಚಟುವಟಿಕೆಗಳಿಗೆ ಘಟಕ ವೆಚ್ಚ ರೂ.5 ಲಕ್ಷ, ಇದರಲ್ಲಿ ರೂ.2.50 ಲಕ್ಷ ಸಹಾಯಧನ ಮತ್ತು ರೂ.2.50 ಲಕ್ಷ ನಿಗಮದಿಂದ ಸಾಲ ಕಲ್ಪಿಸಲಾಗುವುದು.

ಗಂಗಾ ಕಲ್ಯಾಣ ಯೋಜನೆ:
1.20 ಎಕರೆಯಿಂದ 5 ಎಕರೆ ಜಮೀನು ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರು ಹೊಂದಿರುವ ಖುಷ್ಕಿ, ಒಣ ಜಮೀನಿನಲ್ಲಿ ಕೊಳವೆಬಾವಿ ಕೊರೆಸಿ, ಪಂಪ್ಸೆಟ್ ಅಳವಡಿಸಿ, ವಿದ್ಯುದ್ದೀಕರಣಗೊಳಿಸಿ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು. ಈ ಯೋಜನೆಗೆ ಘಟಕವೆಚ್ಚ ರೂ.3.75 ಲಕ್ಷ (ರೂ.50,000 ಸಾಲ ಒಳಗೊಂಡಂತೆ).

ಭೂ ಒಡೆತನ ಯೋಜನೆ:
ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಗರಿಷ್ಟ ಘಟಕವೆಚ್ಚ ರೂ.20 ಲಕ್ಷ (ಸಹಾಯಧನ ಶೇ.50ರಷ್ಟು ಹಾಗೂ ಸಾಲ ಶೇ.50ರಷ್ಟು) ಗರಿಷ್ಟ ಎಷ್ಟು ವಿಸ್ತೀರ್ಣ ಬರುತ್ತದೆಯೋ ಅಷ್ಟು ಜಮೀನನ್ನು ಖರೀದಿಸಿ ಕೊಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ನಗರದ ಕಂಟೋನ್ಮೆಂಟ್ನ ನಂದಿ ಶಾಲೆ ಹಿಂಭಾಗದ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಅಥವಾ ದೂ.08392-245551 ಗೆ ಸಂಪರ್ಕಿಸಬಹುದು ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read