ಕೊಡಗು ಜಿಲ್ಲೆಯಲ್ಲಿ ಪ್ರಸ್ತುತ 17 ಗ್ರಾಮ ಪಂಚಾಯತ್‍ಗಳಲ್ಲಿ ‘ಸಮಗ್ರ ನಾಗರಿಕ ಸೇವಾ ಕೇಂದ್ರ/ ಗ್ರಾಮ ಒನ್ ಕೇಂದ್ರಗಳಿಗೆ ಆಸಕ್ತ ಪ್ರಾಂಚೈಸಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಮಡಿಕೇರಿ ತಾಲ್ಲೂಕಿನ ಹಾಕತ್ತೂರು, ಕರಿಕೆ ಮತ್ತು ಮಕ್ಕಂದೂರು, ವಿರಾಜಪೇಟೆ ತಾಲ್ಲೂಕಿನ ಅಮ್ಮತ್ತಿ, ಚೆಂಬೆಬೆಳ್ಳೂರು ಮತ್ತು ಕದನೂರು, ಸೋಮವಾರಪೇಟೆ ತಾಲ್ಲೂಕಿನ ಗರ್ವಾಲೆ ಮತ್ತು ದೊಡ್ಡಮಳ್ತೆ, ಪೊನ್ನಂಪೇಟೆ ತಾಲ್ಲೂಕಿನ ನಿಟ್ಟೂರು, ಬಲ್ಯಮಂಡೂರು, ಕೆ.ಬಾಡಗ, ಕಿರುಗೂರು, ನಾಲ್ಕೇರಿ, ಬಿ.ಶೆಟ್ಟಿಗೇರಿ, ಟಿ.ಶೆಟ್ಟಿಗೇರಿ, ದೇವರಪುರ ಮತ್ತು ಪೊನ್ನಂಪೇಟೆ,
ಆಸಕ್ತ ಪ್ರಾಂಚೈಸಿಗಳು https://kal-mys.gramaone.karnataka.gov.in/ ಲಿಂಕ್‍ನ ಮೂಲಕ ಅರ್ಜಿ ಸಲ್ಲಿಸಲು ಸೆಪ್ಟೆಂಬರ್, 15 ರವರೆಗೆ ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಇ-ಮೇಲ್ ಐಡಿ: care@blsinternational.net ನ್ನು ಸಂಪರ್ಕಿಸಬಹುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರು ತಿಳಿಸಿದ್ದಾರೆ.
You Might Also Like
TAGGED:ಗ್ರಾಮ ಒನ್