ಕರ್ನಾಟಕ ಬಂಜಾರ ತಾಂಡಾ ಅಭಿವೃದ್ಧಿ ನಿಗಮವು ಬಂಜಾರ ಸಮುದಾಯದ ಸಾಂಪ್ರದಾಯಿಕ ಸಂಸ್ಕೃತಿ ಮತ್ತು ಕಲೆಗಳನ್ನು ಉಳಿಸಿ, ಬೆಳೆಸಿ ಪುನಶ್ಚೇತನಗೊಳಿಸುವ ಉದ್ದೇಶದಿಂದ ಮತ್ತು ಬಂಜಾರ ಕಲಾವಿದರ ಪ್ರತಿಭೆಯನ್ನು ಹೊರಹೊಮ್ಮಿಸಲು ಕಲಾ ಪ್ರತಿಭಾನ್ವೇಷಣೆ-ಕಲಾ ಮಳಾವ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಆಸಕ್ತ ಬಂಜಾರ ಸಮುದಾಯದ ಕಲಾವಿದರಿಂದ ಅರ್ಜಿ ಆಹ್ವಾನಿಸಿದೆ.
ಆಸಕ್ತ ಬಂಜಾರ ಕಲಾವಿದರು ನಿಗಮದ ವಲಯ ಕಚೇರಿಯಿಂದ ನಿಗದಿತ ನಮೂನೆ ಅರ್ಜಿಯನ್ನು ಪಡೆದು, ಭರ್ತಿ ಮಾಡಿ ಅರ್ಜಿಯನ್ನು ಸೆ. 28 ರೊಳಗಾಗಿ ಸಲ್ಲಿಸುವಂತೆ ನಿಗಮದ ಅಭಿವೃದ್ಧಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
You Might Also Like
TAGGED:ಬಂಜಾರ