ರಾಜ್ಯ ಸರ್ಕಾರದಿಂದ ‘ಸ್ವಾವಲಂಬಿ ಸಾರಥಿ’ ಯೋಜನೆಯಡಿ ವಾಹನ ಖರೀದಿಸಲು ಸಹಾಯಧನಕ್ಕೆ ಅರ್ಜಿ ಆಹ್ವಾನ, ಇಲ್ಲಿದೆ ಮಾಹಿತಿ

ಬೆಂಗಳೂರು : ರಾಜ್ಯ ಸರ್ಕಾರದಿಂದ ಸ್ವಾವಲಂಬಿ ಸಾರಥಿ ಯೋಜನೆಯಡಿ ವಾಹನ ಖರೀದಿಸಲು ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹರು ಅರ್ಜಿ ಸಲ್ಲಿಸಬಹುದಾಗಿದೆ.

ಈ ಯೋಜನೆಯನ್ನು ನಿಗಮದ ವತಿಯಿಂದ ರಾಷ್ಟ್ರೀಕೃತ / ಶೆಡ್ಯೂಲ್ಡ್ ಬ್ಯಾಂಕ್ಗಳ RBI ನಿಂದ ಮಾನ್ಯತೆ ಪಡೆದ ವಿವಿಧ ಫೈನಾನ್ಸ್ ಸಂಸ್ಥೆಗಳು (ಫೈನಾನ್ಸ್ ಕಂಪನೀಸ್ / ಕೊ-ಅಪರೇಟಿವ್ ಬ್ಯಾಂಕ್ / ಸೊಸೈಟೀಸ್) ಸಹಯೋಗದೊಂದಿಗೆ ಅನುಷ್ಠಾನಗೊಳಿಸಲಾಗುತ್ತದೆ.(ಪ್ಯಾಸೆಂಜರ್ ಆಟೋರಿಕ್ಷಾಗಳಿಗೆ ಗರಿಷ್ಠ ರೂ. 75,000/- ಸಹಾಯಧನ ನೀಡಲಾಗುವುದು).

ಮಾರ್ಗಸೂಚಿಗಳು:

  1. ಈ ಯೋಜನೆಯನ್ನು ನಿಗಮದ ವತಿಯಿಂದ ರಾಷ್ಟ್ರೀಕೃತ ಬ್ಯಾಂಕುಗಳು / ಶೆಡ್ಯೂಲ್ಡ್ ಬ್ಯಾಂಕ್ RBI ನಿಂದ ಮಾನ್ಯತೆ ಪಡೆದ ವಿವಿಧ (finance companies/co-operative bank societies) ಅನುಷ್ಠಾನಗೊಳಿಸಲಾಗುತ್ತದೆ.
  2. ರಾಷ್ಟ್ರೀಕೃತ ಬ್ಯಾಂಕುಗಳು/ ಶೆಡ್ಯೂಲ್ಡ್ ಬ್ಯಾಂಕ್ RBI ನಿಂದ ಮಾನ್ಯತೆ ಪಡೆದ ವಿವಿಧ ಫೈನಾನ್ಸ್ ಸಂಸ್ಥೆಗಳು (Finance Companies co-operative bank / societies) mẹ đ໐໐໙ rad ಆಟೋರಿಕ್ಷಾ / ಗೂಡ್ಸ್ ವಾಹನ / ಟ್ಯಾಕ್ಸಿ ಖರೀದಿಸಲು ವಾಹನದ on road price ಮೇಲೆ ಕನಿಷ್ಠ ಶೇ. 50 ರಷ್ಟು (ಗರಿಷ್ಠ ರೂ. 3.00 ಲಕ್ಷ) (ಪ್ಯಾಸೆಂಜರ್ ಅಟೋರಿಕ್ಷಾ ಖರೀದಿಗೆ ಗರಿಷ್ಠ ರೂ. 25,000/-) ಸಹಾಯಧನವನ್ನು ನೀಡಲಾಗುವುದು.
  3. ಆಯ್ಕೆ ಸಮಿತಿಯಲ್ಲಿ ಆಯ್ಕೆಯಾದ ಫಲಾನುಭವಿಗಳು ವಾಹನದ on road price ಮೇಲೆ ಕನಿಷ್ಠ ಶೇ. 10ರಷ್ಟು ಮೊತ್ತವನ್ನು ತಮ್ಮ ಪಾಲಿನ ಮುಂಗಡ ಪಾವತಿ ಹಣವನ್ನು (Down payment) ಕಡ್ಡಾಯವಾಗಿ ತಾವು ಪಡೆಯುವ ರಾಷ್ಟ್ರೀಕೃತ ಬ್ಯಾಂಕುಗಳು/ ಷೆಡ್ಯೂಲ್ಡ್ ಬ್ಯಾಂಕ್ RBI ನಿಂದ ಮಾನ್ಯತೆ ಪಡೆದ ವಿವಿಧ ಫೈನಾನ್ಸ್ ಸಂಸ್ಥೆಗಳು (Finance Companies /co-operative bank/societies) ಗಳಲ್ಲಿ ಪಾವತಿಸತಕ್ಕದ್ದು.
  4. ಮಹಿಳೆಯರಿಗೆ ಆದ್ಯತೆ ನೀಡಲಾಗುವುದು.
  5. ಈ ಯೋಜನೆಯಡಿ ಖರೀದಿಸಲಾಗಿರುವ ವಾಹನವನ್ನು ಫಲಾನುಭವಿಗಳು ಸಾಲದ ಅವಧಿಯಲ್ಲಿ ಇತರರಿಗೆ ಪರಭಾರೆ ಮಾಡುವಂತಿಲ್ಲ.
  6. ಫಲಾನುಭವಿಯು ವಾಹನ ಖರೀದಿ ಮಾಡಿದ ತಕ್ಷಣ ತೆರಿಗೆ ಮತ್ತು ವಿಮೆ ಪಾವತಿಸಿರುವ ದಾಖಲೆಗಳ ಪ್ರತಿಯೊಂದಿಗೆ ಜಿಲ್ಲಾ ಕಛೇರಿಗೆ ಮಾಹಿತಿಯನ್ನು ಸಲ್ಲಿಸುವುದು.
  7. ಈ ಯೋಜನೆಯಡಿ ಖರೀದಿಸಿದ ವಾಹನದ ಜೊತೆಯಲ್ಲಿ ಫಲಾನುಭವಿಯ ಭಾವಚಿತ್ರವನ್ನು ತೆಗೆದು ಜಿಲ್ಲಾ ವ್ಯವಸ್ಥಾಪಕರು ಧೃಡೀಕರಿಸಿ ಕಡತದಲ್ಲಿ ಇಡತಕ್ಕದ್ದು.
  8. ನಿಗಮದಿಂದ ಸಹಾಯಧನ ಪಡೆದ ವಾಹನದ ಮೇಲೆ ನಿಗಮದ ಲೋಗೋ ಮತ್ತು `ಕೆಸಿಸಿಡಿಸಿಯಿಂದ ಸಹಾಯಧನ ಪಡೆದ ವಾಹನ’ ಎಂದು ನಮೂದಿಸಲು ಕ್ರಮವಹಿಸುವುದು.
  9. ಎಲ್ಲಾ ಮೂಲಗಳಿಂದ ಕುಟುಂಬದ ಆದಾಯ ವಾರ್ಷಿಕ ರೂ.6.00 ಲಕ್ಷ ಮೀರಿರಬಾರದು.
  10. ಅರ್ಜಿದಾರರು ಅಥವಾ ಕುಟುಂಬದ ಸದಸ್ಯರು ಈ ಹಿಂದೆ ಯಾವುದೇ ಸರ್ಕಾರಿ ಯೋಜನೆಯಲ್ಲಿ ಸಾಲ / ಸಹಾಯಧನ ಪಡೆದಿರಬಾರದು.
    : 63607 53075
    kccdchelpline@gmail.com
    ಹೆಚ್ಚಿನ ವಿವರಗಳಿಗೆ ನಿಗಮದ ವೆಬ್ಸೈಟ್ಗೆ / KMDC ಜಿಲ್ಲಾ ವ್ಯವಸ್ಥಾಪಕರ ಕಚೇರಿಗೆ ಭೇಟಿ ಕೊಡಿ
    kccdclonline.karnataka.gov.in
    ಸಲ್ಲಿಸಬೇಕಾದ ದಾಖಲೆಗಳು:
    1.ಆನ್ಲೈನ್ ಅರ್ಜಿ
  11. ಫಲಾನುಭವಿಯ ಇತ್ತೀಚಿನ 2 ಪಾಸ್ ಪೋರ್ಟ್ ಅಳತೆಯ ಫೋಟೋ
  12. ಆದಾಯ ಮತ್ತು ಅಲ್ಪಸಂಖ್ಯಾತರ ಪ್ರಮಾಣಪತ್ರ
  13. ಪಡಿತರಚೀಟಿ / ಮತದಾರರ ಚೀಟಿ / ಆಧಾರ್ ಕಾರ್ಡ್ ಪ್ರತಿ
  14. ವಾಹನ ಚಾಲನ ಪರವಾನಗಿ ಪ್ರಮಾಣಪತ್ರ
  15. ಅರ್ಜಿದಾರರ ಮತ್ತು ಕುಟುಂಬದ ಸದಸ್ಯರು ವಾಹನ ಯಾವುದೇ ಯೋಜನೆಯಡಿ ಸಾಲಸೌಲಭ್ಯ ಪಡೆದಿಲ್ಲದಿರುವ ಬಗ್ಗೆ (Affidavit). ರಾಜ್ಯ ಸರ್ಕಾರದ ವ್ಯವಸ್ಥಾಪಕರಿಂದ ದೃಢೀಕರಣಪತ್ರ
  16. ಈ ಯೋಜನೆಯಡಿ ಪಡೆದ ವಾಹನವನ್ನು ಸಾಲದ ಅವಧಿಯಲ್ಲಿ ಯಾರಿಗೂ ಪರಭಾರೆ ಮಾಡದಿರುವ ಬಗ್ಗೆ ದೃಢೀಕರಣ ಪತ್ರ (Affidavit).

  17. ವಿ.ಸೂ: KMDC ಯಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಮಾರ್ಗಸೂಚಿಗಳಂತೆ ಈ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು
Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read