ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಉಚಿತ `LPG’ ಗಾಗಿ ಅರ್ಜಿ ಆಹ್ವಾನ

ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಉಜ್ವಲ ಯೋಜನೆ(3ನೇ ಹಂತ)ಯಡಿ ಬಡ ಕುಟುಂಬಗಳ ಮಹಿಳಾ ಸಬಲೀಕರಣದ ಉದ್ದೇಶದಿಂದ ಉಚಿತ ಎಲ್.ಪಿ.ಜಿ ವಿತರಣೆ ಮಾಡಲಾಗುತ್ತದೆ.

ಉಜ್ವಲ್ ಯೋಜನೆಯಡಿ ಮೂರನೇ ಹಂತದ ಎಲ್.ಪಿ.ಜಿ ಸಂಪರ್ಕ ಪಡೆಯುವ ಗ್ರಾಹಕರಿಗೆ  ಎರಡು ಬರ್ನರ್ ಸ್ಟೌವ್, 14.2 ಕೆ.ಜಿ ಸಿಲಿಂಡರ್ ಮತ್ತು ಎರಡು 5 ಕೆ.ಜಿ ಸಿಲಿಂಡರ್, ಒಂದು ರೆಗ್ಯುಲೇಟರ್, ಒಂದು ಸುರಕ್ಷಾ ಹೋಸ್, ಡಿ.ಜಿ.ಸಿ.ಸಿ ಬುಕ್‍ಗಳನ್ನು ಸಂಪೂರ್ಣ ಉಚಿತವಾಗಿ ನೀಡಲಾಗುವುದು. ಇದುವರೆಗೂ ಎಲ್.ಪಿ.ಜಿ ಅನಿಲ ಸಂಪರ್ಕಗಳನ್ನು ಹೊಂದಿರದ ಕುಟುಂಬದ ಮಹಿಳೆಯರು ಅಗತ್ಯ ದಾಖಲೆಗಳೊಂದಿಗೆ ಹತ್ತಿರದ ಎಲ್.ಪಿ.ಜಿ ವಿತರಕ ಕಂಪನಿಗೆ ಭೇಟಿ ನೀಡಿ ಸೌಲಭ್ಯವನ್ನು ಪಡೆಯಬಹುದು ಮತ್ತು ಕ್ಯೂ.ಆರ್.ಕೋಡ್ ಮೂಲಕ ಯೋಜನೆ ಮಾಹಿತಿ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ. ತಿಳಿಸಿದ್ದಾರೆ.

ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಲಾಭ ಪಡೆಯಲು ಎಲ್‌ಪಿಜಿ ವಿತರಣಾ ಏಜೆನ್ಸಿಯಲ್ಲಿ ಅರ್ಜಿ ಭರ್ತಿ ಮಾಡಿ ಸಲ್ಲಿಸುವ ಮೂಲಕ ಆಫ್‌ಲೈನ್ ಮೋಡ್ ಮೂಲಕ ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಮೋಡ್‌ನಲ್ಲಿ ಅರ್ಜಿ ಸಲ್ಲಿಸುವುದಾದರೆ ಅರ್ಜಿದಾರರು ಮೊದಲು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ https://www.pmuy.gov.in ಗೆ ಹೋಗಿ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಬಹುದು ಮತ್ತು ಈ ಫಾರ್ಮ್ ಅನ್ನು ಹತ್ತಿರದ ಎಲ್‌ಪಿಜಿ ಕೇಂದ್ರದಲ್ಲಿ ಸಲ್ಲಿಸಬೇಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read