ರೈತರಿಗೆ ಆಧುನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಪಡೆಯಲು ಅರ್ಜಿ ಆಹ್ವಾನ

ಹಾಸನ : ಜಿಲ್ಲೆಯ ರೈತರಿಗೆ, ರೈತ ಮಹಿಳೆಯರಿಗೆ ಹಾಗೂ ಆಸಕ್ತಿಯುಳ್ಳ ಎಲ್ಲರಿಗೂ ಪಶು ಪಾಲನಾ ಇಲಾಖೆಯ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರ, ಹಾಸನ ವತಿಯಿಂದ ತರಬೇತಿಯನ್ನು ಏರ್ಪಡಿಸಲಾಗಿದೆ.

ತರಬೇತಿಯಲ್ಲಿ ಭಾಗವಹಿಸುವ ಶಿಬಿರಾರ್ಥಿಗಳಿಗೆ ಯಾವುದೇ ಪ್ರಯಾಣ ಭತ್ಯೆ ಅಥವಾ ಸ್ಟ್ರೈಪಂಡ್ ನೀಡಲಾಗುವುದಿಲ್ಲ. ಆಸಕ್ತಿಯುಳ್ಳವರು ಆಧಾರ್ ಕಾರ್ಡ್, ಪರಿಶಿಷ್ಟ ಜಾತಿ / ಪಂಗಡಕ್ಕೆ ಸೇರಿದವರು ಜಾತಿ ಪ್ರಮಾಣ ಪತ್ರ ಜೆರಾಕ್ಸ್ ಪ್ರತಿ ಹಾಗೂ ಎರಡು ಭಾವಚಿತ್ರದೊಂದಿಗೆ ತರಬೇತಿ ಪ್ರಾರಂಭವಾಗುವ ದಿನಾಂಕದAದು ಬೆಳಿಗ್ಗೆ 10.30 ಗಂಟೆಯೊಳಗೆ ಉಪ ನಿರ್ದೇಶಕರ ಕಚೇರಿ, ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರ, ಬಿ.ಎಂ ರಸ್ತೆ ಸಂತೆಪೇಟೆ, ಹಾಸನದಲ್ಲಿ ಹಾಜರಾಗಬೇಕೆಂದು ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08172-235226 ಸಂಪರ್ಕಿಸಬಹುದು.

ತರಬೇತಿ ವಿವರ : ರೈತರಿಗೆ ಆಧುನಿಕ ಕುರಿ ಮತ್ತು ಮೇಕೆ ಸಾಕಣಿ
ಕೆ ತರಬೇತಿ ಸೆ.02 ಮತ್ತು ಸೆ.03 ರವರೆಗೆ, ರೈತರಿಗೆ ವೈಜ್ಞಾನಿಕ ಆಧುನಿಕ ಕೋಳಿ ಸಾಕಣಿಕೆ ತರಬೇತಿ ಸೆ.09 ಮತ್ತು ಸೆ.10 ರವರೆಗೆ ತರಬೇತಿ ನಡೆಯಲಿದೆ ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರದ ಉಪ ನಿರ್ದೇಶಕರು ತಿಳಿಸಿದ್ದಾರೆ.

TAGGED:
Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read