ಚಿತ್ರದುರ್ಗ ಅಂಚೆ ವಿಭಾಗದ ವ್ಯಾಪ್ತಿಯಲ್ಲಿ ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆಯ ಪ್ರತಿನಿಧಿಗಳಾಗಿ ಕಾರ್ಯನಿರ್ವಹಿಸಲು ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ತಮ್ಮ ಸಂಪೂರ್ಣ ವಿವರ ಹಾಗೂ ದಾಖಲೆಗಳೊಂದಿಗೆ ಚಿತ್ರದುರ್ಗ ನಗರದ ಫಿಲ್ಟರ್ ಹೌಸ್ ಹಿಂಭಾಗದ ವಿಭಾಗೀಯ ಅಂಚೆ ಕಚೇರಿಯ ಮೊದಲನೇಯ ಮಹಡಿಯಲ್ಲಿ ಇದೇ ಜುಲೈ 29ರಂದು ಬೆಳಿಗ್ಗೆ 11ಕ್ಕೆ ಜರುಗುವ ನೇರ ಸಂದರ್ಶನಕ್ಕೆ ಹಾಜರಾಗಬಹುದು.
ಅಭ್ಯರ್ಥಿಯು ಕನಿಷ್ಟ 18 ವರ್ಷ ವಯೋಮಿತಿಯವರಾಗಿರಬೇಕು. ಎಸ್‍ಎಸ್‍ಎಲ್‍ಸಿ ಪಾಸಾಗಿರಬೇಕು. ಆಯ್ಕೆಯಾದ ಅಂಚೆ ಜೀವ ವಿಮಾ ಪ್ರತಿನಿಧಿಗಳು ರೂ.5000/- ರೂಪಾಯಿಗಳನ್ನು ಉಳಿತಾಯ ಪತ್ರ ರೂಪದಲ್ಲಿ ಜಮಾ ಮಾಡಲು ತಯಾರಿರಬೇಕು.
ನಿರುದ್ಯೋಗಿಗಳು, ಸ್ವ ಉದ್ಯೋಗಿಗಳು, ಇತರೆ ವಿಮಾ ಕಂಪನಿಗಳ ಮಾಜಿ ಪ್ರತಿನಿಧಿಗಳು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ನಿವೃತ್ತ ಶಿಕ್ಷಕರು ಹಾಗೂ ಆಸಕ್ತಿಯುಳ್ಳ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗುವುದು.
ಹೆಚ್ಚಿನ ಮಾಹಿತಿಗಾಗಿ ಅಂಚೆ ಜೀವ ವಿಮೆ ಅಭಿವೃದ್ಧಿ ಅಧಿಕಾರಿ ಪಿ.ಮೊಹಮ್ಮದ್ ಶಫಾಯತ್ ಉಲ್ಲಾ ಶರೀಫ್ ಅವರ ದೂರವಾಣಿ ಸಂಖ್ಯೆ 9449849279 ಸಂಪರ್ಕಿಸಬಹುದು ಎಂದು ಚಿತ್ರದುರ್ಗ ವಿಭಾಗ ಅಂಚೆ ಅಧೀಕ್ಷಕರಾದ ಕೆ.ಆರ್.ಉಷಾ ತಿಳಿಸಿದ್ದಾರೆ.