BIG NEWS : ಜುಲೈ-2025ರ ವಾಣಿಜ್ಯ ಪರೀಕ್ಷೆಗೆ ಖಾಸಗಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ, ಇಲ್ಲಿದೆ ಸಂಪೂರ್ಣ ಮಾಹಿತಿ.!

ಬೆಂಗಳೂರು : ಜುಲೈ-2025ರ ವಾಣಿಜ್ಯ ಪರೀಕ್ಷೆಗೆ ಖಾಸಗಿ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಜುಲೈ-2025ರ ಮಾಹೆಯಲ್ಲಿ ನಡೆಯುವ ವಾಣಿಜ್ಯ ಪರೀಕ್ಷೆಗೆ ಖಾಸಗಿಯಾಗಿ ನೋಂದಣಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.

ವಾಣಿಜ್ಯ ಪರೀಕ್ಷೆಗಳಾದ ಆಂಗ್ಲ ಮತ್ತು ಕನ್ನಡ ಬೆರಳಚ್ಚು ಪರೀಕ್ಷೆ. ಕನ್ನಡ ಮತ್ತು ಆಂಗ್ಲ ಶೀಘ್ರಲಿಪಿ ಪರೀಕ್ಷೆಗಳನ್ನು ಖಾಸಗಿಯಾಗಿ ತೆಗೆದುಕೊಂಡು ಪರೀಕ್ಷೆಗೆ ಹಾಜರಾಗಲು ಇಚ್ಚಿಸುವ ಅಭ್ಯರ್ಥಿಗಳು ತಮಗೆ ಹತ್ತಿರವಿರುವ ಹಾಗೂ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದಾದರೂ ವಾಣಿಜ್ಯ ಶಿಕ್ಷಣ ಸಂಸ್ಥೆಗಳ ಮೂಲಕ ನಿಗದಿತ ಅರ್ಜಿ ನಮೂನೆ ಹಾಗೂ ನೋಂದಣಿ ಶುಲ್ಕ ರೂ.180-00ಗಳನ್ನು ಪಾವತಿಸಿದ ನೆಫ್ಟ್ ಚಲನ್ಗಳೊಂದಿಗೆ ತಮ್ಮ ಪ್ರಸ್ತಾವನೆಗಳನ್ನು ನಿರ್ದೇಶಕರು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ, 6ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು-03ರವರಿಗೆ ಕಳುಹಿಸಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳುವುದು. ನೋಂದಣಿ ಪ್ರಮಾಣ ಪತ್ರಗಳನ್ನು (ಎನ್ರೋಲ್ಮೆಂಟ್ ಸರ್ಟಿಫಿಕೇಟ್) ಸಂಬಂಧಪಟ್ಟ ಸಂಸ್ಥೆಯ ಪ್ರಾಂಶುಪಾಲರುಗಳಿಂದ ಪಡೆದು, ನಂತರದಲ್ಲಿ ಸಂಸ್ಥೆಯ ಮೂಲಕ ಅರ್ಜಿ ಹಾಗೂ ಪರೀಕ್ಷಾ ಶುಲ್ಕವನ್ನು ಆನ್ಲೈನ್ ಮೂಲಕವೇ ಪರೀಕ್ಷಾ ಮಂಡಲಿಗೆ ಸಲ್ಲಿಸುವುದು.

ಅಭ್ಯರ್ಥಿಗಳು ಖಾಸಗಿ ನೋಂದಣಿ ಶುಲ್ಕವಾಗಿ ರೂ.180-00 ( ಒಂದು ನೂರ ಎಂಭತ್ತು ರೂಪಾಯಿಗಳು ಮಾತ್ರ)ಗಳನ್ನು ಯಾವುದಾದರೂ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಮಂಡಲಿಯ ಖಾತೆ ಸಂಖ್ಯೆ: 1261000109019723 IFSC Code: PUNB0126100 ಗೆ ನೆಫ್ಟ್ ಚಲನ್ ಮೂಲಕ ಜಮಾ ಮಾಡುವುದು. ಹಾಗೂ ಚಲನ್ ಪ್ರತಿಯನ್ನು ನಾಮಿನಲ್ ರೋಲ್ನೊಂದಿಗೆ ಸಲ್ಲಿಸುವುದು. ನೋಂದಣಿ ಮಾಡಲು ಸಲ್ಲಿಸಬೇಕಾದ ಅರ್ಜಿ ಶುಲ್ಕ ಮತ್ತು ಇತರೆ ಅವಶ್ಯಕವಾದ ದಾಖಲೆಗಳನ್ನು ಹತ್ತಿರವಿರುವ ಹಾಗೂ ಸರ್ಕಾರದಿಂದ ಮಾನ್ಯತೆ ಪಡೆದ ವಾಣಿಜ್ಯ ಸಂಸ್ಥೆಯ ಮುಖಾಂತರ ಕಳುಹಿಸತಕ್ಕದ್ದು.
ಈ ಕೆಳಗೆ ಸೂಚಿಸಿರುವ ಪ್ರಕರಣಗಳಲ್ಲಿ ಮಾತ್ರ ಖಾಸಗಿಯಾಗಿ ಈ ಪರೀಕ್ಷೆಗೆ ನೋಂದಾಯಿಸಲು ಅರ್ಹರಾಗಿರುತ್ತಾರೆ.

ಅಭ್ಯರ್ಥಿಯು ಯಾವುದೇ ಸರ್ಕಾರಿ/ಸ್ಥಳೀಯ ಸಂಸ್ಥೆ/ರಿಜಿಸ್ಟರ್ ಖಾಸಗಿ ಸಂಸ್ಥೆಗಳಲ್ಲಿ ಕನಿಷ್ಠ ಮೂರು ವರ್ಷ ಸೇವೆಯನ್ನು ಸಲ್ಲಿಸಿರಬೇಕು.
ಖಾಸಗಿಯಾಗಿ ಬೆರಳಚ್ಚು ಅಥವಾ ಶೀಘ್ರಲಿಪಿ ಪ್ರೌಢ ದರ್ಜೆ/ಪ್ರವೀಣ ದರ್ಜೆ ಪರೀಕ್ಷೆಗೆ ಕುಳಿತುಕೊಳ್ಳಲು ಬಯಸುವವರು ಸಂಬಂಧಪಟ್ಟ ವಿಷಯದ ಪ್ರಥಮ ದರ್ಜೆ/ ಪ್ರೌಢದರ್ಜೆ ಪರೀಕ್ಷೆಯನ್ನು ಒಂದು ವರ್ಷ ಮುಂಚಿತವಾಗಿ ಉತ್ತೀರ್ಣ ಮಾಡಿರಬೇಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read