BIG NEWS : ಕರ್ನಾಟಕದಲ್ಲಿ ‘TET’ ಪರೀಕ್ಷೆಗೆ ಅರ್ಜಿ ಆಹ್ವಾನ, ಅಭ್ಯರ್ಥಿಗಳಿಗೆ ಇಲ್ಲಿದೆ ಸಂಪೂರ್ಣ ಮಾಹಿತಿ.!

ಬೆಂಗಳೂರು : ಕರ್ನಾಟಕದಲ್ಲಿ TET ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಡಿ.7 ರಂದು ಶಿಕ್ಷಕರ ಅರ್ಹತಾ ಪರೀಕ್ಷೆ ನಡೆಯಲಿದೆ. ಪರೀಕ್ಷೆಗೆ ಅರ್ಜಿ ಸಲ್ಲಿಸುವ ಸಂಬಂಧ ಅಧಿಕೃತ ಸುತ್ತೋಲೆ ಹೊರಡಿಸಲಾಗಿದೆ.

ಆರ್.ಟಿ.ಇ ಕಾಯ್ದೆಯ ಸೆಕ್ಷನ್ 23 ಉಪ ವಿಭಾಗ(1)ರ ನಿಬಂಧನೆಗಳ ಅನುಸಾರ 23 ಆಗಸ್ಟ್ 2010, 29 ಜುಲೈ 2011 ಮತ್ತು 28 ಜೂನ್ 2018 ರ ಅಧಿಸೂಚನೆಯಂತೆ ರಾಷ್ಟ್ರೀಯ ಶಿಕ್ಷಣ ಶಿಕ್ಷಕರ ಪರಿಷತ್ (NCTE) 1 ರಿಂದ 8ನೇ ತರಗತಿಗಳ ಶಿಕ್ಷಕರಾಗಿ ನೇಮಕಾತಿಗೆ ಅರ್ಹರಾಗಲು ಕನಿಷ್ಠ ಅರ್ಹತೆಗಳನ್ನು ನಿಗದಿಪಡಿಸಿದೆ.

ಆರ್.ಟಿ.ಇ ಕಾಯ್ದೆ 2ನೇ ವಿಭಾಗದಲ್ಲಿ ಷರತ್ತು (ಎನ್) ನಲ್ಲಿ ಉಲ್ಲೇಖಿಸಲ್ಪಟ್ಟಿರುವಂತೆ ಯಾವುದೇ ಶಾಲೆಗಳಲ್ಲಿ ಶಿಕ್ಷಕರಾಗಿ ನೇಮಕಾತಿಗೆ ಅರ್ಹತೆ ಪಡೆಯಲು NCTE ಯಿಂದ ರೂಪಿಸಲಾದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಸೂಕ್ತ ಸರ್ಕಾರದ ಮೂಲಕ ನಡೆಸಲಾಗುವ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ (ಟಿ.ಇ.ಟಿ.) ಉತ್ತೀರ್ಣರಾಗಿರಬೇಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read