ಬೆಂಗಳೂರು ನಗರ ಜಿಲ್ಲೆ : ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಬೆಂಗಳೂರು ನಗರ ಜಿಲ್ಲಾ ಶಾಖೆಯಲ್ಲಿ ಗೌರವಧನ ಆಧಾರದ ಮೇಲೆ ಕಾರ್ಯನಿರ್ವಹಿಸಲು ಟೈಪಿಸ್ಟ್ ಕಾಮ್ ಸಂಯೋಜಕರು ಹುದ್ದೆ ಹಾಗೂ ದೀರ್ಘಾವಧಿ ಇಂಟರ್ನ್ ಶಿಪ್ ಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ತಮ್ಮ ಸ್ವವಿವರಗಳೊಂದಿಗೆ ಗೌರವ ಕಾರ್ಯದರ್ಶಿ, IRCS ಬೆಂಗಳೂರು ನಗರ ಜಿಲ್ಲೆ ಅಥವಾ ಇ-ಮೇಲ್ cdmvm14@gmail.com ಇಲ್ಲಿಗೆ ಪತ್ರಿಕಾ ಪ್ರಕಟಣೆಗೊಂಡ 07 ದಿನಗಳ ಒಳಗೆ ಅರ್ಜಿಗಳನ್ನು ಸಲ್ಲಿಸಬಹುದು.ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 080-2214243, 2211292 ಗೆ ಸಂಪರ್ಕಿಸಬಹುದು ಎಂದು ಬೆಂಗಳೂರು ನಗರ ಶಾಖೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಗೌರವ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
