ಗೌರವ ಧನ ಆಧಾರದ ಮೇಲೆ ಆಪ್ತಸಮಾಲೋಚಕರ ಹುದ್ದೆಗೆ ಅರ್ಜಿ ಆಹ್ವಾನ

ಬೆಂಗಳೂರು : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ 2025-26ನೇ ಸಾಲಿನ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿಯಲ್ಲಿ ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ / ಕಾರ್ಯಸ್ಥಳಗಳಲ್ಲಿ / ನಗರ ಸ್ಲಂಗಳಲ್ಲಿ ಆಪ್ತಸಮಾಲೋಚನೆಯನ್ನು ಒದಗಿಸಲು ಗೌರವ ಧನದ ಆಧಾರದ ಮೇಲೆ ಆಪ್ತಸಮಾಲೋಚಕರ -04 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅಭ್ಯರ್ಥಿಗಳು ಮನಃಶಾಸ್ತ್ರ (Psychology) ಅಥವಾ ಸಮಾಜ ಕಾರ್ಯ (Social Work) ದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. 45 ವರ್ಷದೊಳಗಿನ ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿಗಳ ಕಛೇರಿ, ಎಂ.ಎಂ.ರಸ್ತೆ, ಫ್ರೇಜರ್ ಟೌನ್, ಬೆಂಗಳೂರು -560 005 ಇಲ್ಲಿ ಅರ್ಜಿಗಳನ್ನು ಪಡೆದು, 2025ರ ಸೆಪ್ಟೆಂಬರ್ 08 ರಂದು ಸಂಜೆ 05.00 ಗಂಟೆಯೊಳಗೆ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ : 9844430991 ಗೆ ಸಂಪರ್ಕಿಸಬಹುದು ಎಂದು ಬೆಂಗಳೂರು ನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read