BIG NEWS : ‘ಕರಾಮುವಿವಿ’ಯಲ್ಲಿ ವಿವಿಧ ಕೋರ್ಸ್’ಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ, ವಿದ್ಯಾರ್ಥಿಗಳಿಗೆ ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು : ಕರಾಮುವಿವಿಯಲ್ಲಿ ವಿವಿಧ ಕೋರ್ಸ್ ಗಳ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.

2025-26ರ ಜುಲೈ ಆವೃತ್ತಿಯಲ್ಲಿ ಯುಜಿಸಿ ಅನುಮೋದಿತ ಓಡಿಎಲ್ ಮಾದರಿಯ (ಆಫ್‌ಲೈನ್) ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳ ಪ್ರವೇಶಾತಿಗಾಗಿ ಆನ್‌ಲೈನ್ ಮೂಲಕ ಉಲ್ಲೇಖ(1) ರ ಅಧಿಸೂಚನೆಗಳನ್ವಯ ಈಗಾಗಲೇ ಅರ್ಜಿ ಆಹ್ವಾನಿಸಲಾಗಿದ್ದು, ಯುಜಿಸಿಯ ಉಲ್ಲೇಖ(2) ರಿಂದ (4)ರ ನಿರ್ದೇಶನಗಳು ಹಾಗೂ ಉಲ್ಲೇಖ(5)ರ ಟಿಪ್ಪಣೆಯನ್ವಯ ವಿದ್ಯಾರ್ಥಿಗಳು ಕೆಳಕಂಡ ಶಿಕ್ಷಣಕ್ರಮಗಳಿಗೆ ಮಾತ್ರ ವಿವಿಯ ಅಂತರ್ಜಾಲದಲ್ಲಿರುವ ಅಡ್ಮಿಷನ್ (https://ksouportal.com/views/StudentHome.aspx) , ಆಯಾ ಶಿಕ್ಷಣಕ್ರಮಗಳಿಗೆ ನಿಗದಿಪಡಿಸಿರುವ ಶೈಕ್ಷಣಿಕ ವಿದ್ಯಾರ್ಹತೆಯನುಸಾರ ದಾಖಲಾತಿಗಳನ್ನು ವಿಶ್ವವಿದ್ಯಾನಿಲಯದ ಕೇಂದ್ರ ಕಚೇರಿ ಮೈಸೂರು ಅಥವಾ ಹತ್ತಿರದ ವಿವಿಧ ಪ್ರಾದೇಶಿಕ ಕೇಂದ್ರಗಳಲ್ಲಿ ಪ್ರವೇಶಾತಿ ಪಡೆಯಬಹುದಾಗಿದೆ.

ಹೆಚ್ಚಿನ ವಿವರಗಳಿಗಾಗಿ, ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯದ ಅಧಿಕೃತ ವೆಬ್ ಸೈಟ್ www.ksoumysuru.ac.in ಅನ್ನು ಅಥವಾ ಸಹಾಯವಾಣಿ ಸಂಖ್ಯೆ: 8690544544, ಅಥವಾ ಇಮೇಲ್ techsupport @ksouportal.com ಅಥವಾ ០៨ ៩ – ៩ : 0821-2500981, 0821-2519941/43/48/52 Extn: 592/590/351/2/3/5/6 ಅಥವಾ ಆಯಾ ಪ್ರಾದೇಶಿಕ ಕೇಂದ್ರಗಳನ್ನು ಸಂಪರ್ಕಿಸುವುದು / ಕಲಿಕಾರ್ಥಿ ಸಹಾಯ ಕೇಂದ್ರಗಳನ್ನು ಪ್ರವೇಶಾತಿ ಪೂರ್ವ ಸಮಾಲೋಚನೆಗೆ ಮಾತ್ರ ಸಂಪರ್ಕಿಸುವುದು.

ಸಿದ್ದಪಾಠಗಳ ಸಾಫ್ಟ್ ಪ್ರತಿ / ಆಂತರಿಕ ನಿಬಂಧನೆ / ಇತರೆ ಶೈಕ್ಷಣಿಕ ಸೇವೆಗಳಿಗಾಗಿ ವಿವಿ ನಿಲಯವು ಹೊಸ ಅಪ್ KSOU Digital Academic Platform App – LMS) ಅನ್ನು ಸಿದ್ಧಪಡಿಸಿದ್ದು, ಅದನ್ನು ವಿದ್ಯಾರ್ಥಿಗಳು ಡೌನ್‌ಲೋಡ್ ಮಾಡಿ ಕೊಂಡು, ತಮ್ಮ ನೊಂದಣಿ ಸಂಖ್ಯೆ / ಮೊಬೈಲ್ ಸಂಖ್ಯೆಯನ್ನು ದಾಖಲಿಸಿ ರಿಜಿಸ್ಟರ್ ಮಾಡಿಕೊಂಡು ಆ ಆಪ್‌ನಲ್ಲಿ ಮಾಹಿತಿ ಗಳನ್ನು ಪಡೆಯಬಹುದಾಗಿದೆ. ಹೆಚ್ಚಿನ ವಿವರಗಳಿಗಾಗಿ ವಿದ್ಯಾರ್ಥಿಗಳು ಸಹಾಯವಾಣಿ ಮೊಬೈಲ್ ಸಂಖ್ಯೆ: 9873037405/6360296451 ಅಥವಾ ಇಮೇಲ್ ksouacademicplatform@gmail.com ಅನ್ನು ಸಂಪರ್ಕಿಸುವುದು.ಪಜಾ/ಪಪ ವರ್ಗಕ್ಕೆ ಸೇರಿದ ಅರ್ಹ ವಿದ್ಯಾರ್ಥಿಗಳು ನಿಗದಿತ ಶುಲ್ಕವನ್ನು ಪಾವತಿಸಿ ಸಮಾಜ ಕಲ್ಯಾಣ ಇಲಾಖೆಯಿಂದ ಶುಲ್ಕ ಮರುಭರಿಕೆ ಮಾಡಿಕೊಳ್ಳುವ ಷರತ್ತಿಗೆ ಒಳಪಟ್ಟು ಶುಲ್ಕ ವಿನಾಯಿತಿ ಯೋಜನೆಯಡಿ ಪ್ರವೇಶಾತಿ ಪಡೆಯಬಹುದಾಗಿದೆ. ಪ್ರವೇಶಾತಿಯು ವಿವಿಯ ವಿದ್ಯಾರ್ಥಿ ವೇತನ ಘಟಕವು ವಿಧಿಸುವ ಷರತ್ತಿಗೊಳಪಟ್ಟಿರುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read