ಪ್ರಧಾನಮಂತ್ರಿ ಮತ್ಸ್ಯಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿ ಸಹಾಯಧನಕ್ಕೆ ಅರ್ಜಿ ಆಹ್ವಾನ

ಶಿವಮೊಗ್ಗ : ಮೀನುಗಾರಿಕೆ ಇಲಾಖೆಯು 2022-23 ರಿಂದ 2024-25ನೇ ಸಾಲಿನವರೆಗೂ ಮರು ಹಂಚಿಕೆಯಾಗಿರುವ ಪ್ರಧಾನ ಮಂತ್ರಿ ಮತ್ಸ್ಯಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿ ವಿವಿಧ ಘಟಕಗಳಿಗೆ ಸಹಾಯಧನಕ್ಕಾಗಿ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಮೀನು ಕೃಷಿಕೊಳಗಳ ನಿರ್ಮಾಣ, ಮೀನುಕೃಷಿ ಕೊಳ ನಿರ್ಮಾಣ ಮಾಡಿ ಮೀನುಕೃಷಿ ಕೈಗೊಂಡವರಿಗೆ ಹೂಡಿಕೆಗಳ ವೆಚ್ಚದ ಮೇಲೆ ಸಹಾಯ, ಯಾಂತ್ರೀಕೃತ ದೋಣಿ ಖರೀದಿಗೆ ಸಹಾಯ, ಮೀನಿಮರಿ ಪಾಲನಾ ಘಟಕ ನಿರ್ಮಾಣದ ಬಗ್ಗೆ ಸಹಾಯ, ಸೈಕಲ್ ವಿತ್ ಐಸ್ಬಾಕ್ಸ್, ಮಧ್ಯಮ ವರ್ಗದ ಅಲಂಕಾರಿಕ ಸಾಕಾಣಿಕೆ ಘಟಕ (ಪ.ಜಾ) ಮತ್ತು ಹೊಸತಾದ ಮೀನುಮಾರಾಟದ ಕಿಯೋಸ್ಕ್ ನಿರ್ಮಾಣಕ್ಕಾಗಿ ಸಹಾಯ ಧನ ನೀಡಲಾಗುತ್ತಿದ್ದು, ಘಟಕಗಳ ಉಪಯೋಜನೆಗಳನ್ನು ಪಡೆಯಲು ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಶೇ. 40 ರಷ್ಟು ಹಾಗೂ ಪ.ಜಾ/ಪ.ಪಂ. ಮತ್ತು ಮಹಿಳಾ ಫಲಾನುಭವಿಗಳಿಗೆ ಶೇ. 60 ರಷ್ಟು ಸಹಾಯಧನ ನೀಡಲಾಗುವುದು.

ಆಸಕ್ತರು ನಿಗದಿತ ನಮೂನೆ ಅರ್ಜಿಯನ್ನು ಆಯಾ ತಾಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಫೆ.07 ರೊಳಗಾಗಿ ಸಲ್ಲಿಸುವಂತೆ ಮೀನುಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read