JOB ALERT : ಅರೆಕಾಲಿಕ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನ

ಶಿವಮೊಗ್ಗ : ಸೊರಬದ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯ ವತಿಯಿಂದ 2023-24 ನೇ ಶೈಕ್ಷಣಿಕ ಸಾಲಿಗೆ ಕೆಳಕಂಡ ವಿಭಾಗಗಳಲ್ಲಿ ಉಪನ್ಯಾಸಕರ ಕೊರತೆ ಇರುವುದರಿಂದ ಅರೆಕಾಲಿಕ ಉಪನ್ಯಾಸಕರ ನೇಮಕ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಆಯಾ ವಿಭಾಗಗಳ ವಿದ್ಯಾರ್ಥಿಗಳಿಗೆ ಪಾಠ-ಪ್ರವಚನಗಳನ್ನು ನಡೆಸಲು ಅರೆಕಾಲಿಕ ಉಪನ್ಯಾಸಕರುಗಳ ಅವಶ್ಯಕತೆ ಇರುವುದರಿಂದ ಇ ಮತ್ತು ಸಿ ವಿಭಾಗ, ಆಟೋಮೊಬೈಲ್ ವಿಭಾಗ, ಸಿ.ಎ ವಿಭಾಗ, ಮೆಕ್ಯಾನಿಕಲ್ ವಿಭಾಗಗಳಿಗೆ ಬಿ.ಇ ಇನ್ ಇ ಮತ್ತು ಸಿ, ಬಿ.ಇ ಇನ್ ಆಟೋಮೊಬೈಲ್, ಬಿ.ಇ ಇನ್ ಸಿ.ಎಸ್, ಬಿ.ಇ ಇನ್ ಮೆಕ್ಯಾನಿಕ್ ಗಳಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಆಸಕ್ತ ಅಭ್ಯರ್ಥಿಗಳು ಅಂಕಪಟ್ಟಿ, ಪ್ರಮಾಣಪತ್ರ, ರೆಸ್ಯೂಮ್, ಫೋಟೊ ಅಗತ್ಯ ದಾಖಲೆಗಳೊಂದಿಗೆ ಸೊರಬ ಸರ್ಕಾರಿ ಪಾಲಿಟೆಕ್ನಿಕ್ ಪ್ರಾಚಾರ್ಯರ ಕಚೇರಿಗೆ ಸಲ್ಲಿಸತಕ್ಕದ್ದು ಎಂದು ಸರ್ಕಾರಿ ಪಾಲಿಟೆಕ್ನಿಕ್ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read