ಗಮನಿಸಿ : ಬ್ಯಾಂಕಿಂಗ್ ಮತ್ತು SSC ಪರೀಕ್ಷೆಗೆ ಆನ್ಲೈನ್ ತರಬೇತಿ ಪಡೆಯಲು ಅರ್ಜಿ ಆಹ್ವಾನ

ಮಡಿಕೇರಿ : ಆರ್ಮಿ ವೆಲ್ಪೇರ್ ಪ್ಲೇಸ್ಮೆಂಟ್ ಆರ್ಗನೈಸೇಷನ್(ಎಡಬ್ಲ್ಯುಪಿಒ), ನವದೆಹಲಿ, ಇವರು ಮಾವೆನ್ ಕೋಹರ್ಟ್ ಕೋಚಿಂಗ್ ಸೆಂಟರ್ ಇವರ ಸಹಯೋಗದೊಂದಿಗೆ ವಿಶೇಷವಾಗಿ ಮಾಜಿ ಸೈನಿಕರಿಗಾಗಿ (ಸೈನಾಧಿಕಾರಿಗಳನ್ನು ಹೊರತುಪಡಿಸಿ) ರಿಯಾಯಿತಿ ದರದಲ್ಲಿ ಬ್ಯಾಂಕಿಂಗ್ ಮತ್ತು ಎಸ್ಎಸ್ಸಿ ಪರೀಕ್ಷೆಗಳಿಗೆ ಆನ್ಲೈನ್ ತರಬೇತಿ ಕೋರ್ಸುಗಳನ್ನು ನವೆಂಬರ್, 06 ರಿಂದ ಪ್ರಾರಂಭಿಸಲಾಗುತ್ತಿದೆ.

ಬ್ಯಾಂಕಿಂಗ್ ಪರೀಕ್ಷೆಗಳಿಗೆ ರೂ.3,658 ಆಗಿದ್ದು, 144 ಗಂಟೆಗಳ ತರಬೇತಿ ನೀಡಲಾಗುತ್ತದೆ, ಎಸ್ಎಸ್ಸಿ ಪರೀಕ್ಷೆಗಳಿಗೆ ರೂ.4602, 192 ಗಂಟೆಗಳ ತರಬೇತಿ, ಮತ್ತು ಬ್ಯಾಂಕಿಂಗ್ ಮತ್ತು ಎಸ್ಎಸ್ಸಿ ಎರಡು ಪರೀಕ್ಷೆಗಳಿಗೆ ರೂ.5,900 ಹಾಗೂ 230 ಗಂಟೆಗಳ ತರಬೇತಿ ನೀಡುತ್ತಿದ್ದು, ಮಾಜಿ ಸೈನಿಕರು (ಸೈನ್ಯಾಧಿಕಾರಿ ಹೊರತುಪಡಿಸಿ) ಬ್ಯಾಂಕಿಂಗ್ ಮತ್ತು ಎಸ್ಎಸ್ಸಿ ಪರೀಕ್ಷೆಗಳನ್ನು ಎದುರಿಸಲು ಇದರ ಸದುಪಯೋಗ ಪಡೆದುಕೊಳ್ಳಲು ಎಡಬ್ಲ್ಯುಪಿಒ ನಲ್ಲಿ ನೋಂದಾಯಿಸಬೇಕಿದೆ ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರಾದ ಬಿ.ಆರ್.ಶೆಟ್ಟಿ ಅವರು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read