ಪಶುಸಂಗೋಪನೆಯಲ್ಲಿ ಡಿಪ್ಲೋಮಾ ಕೋರ್ಸಿನ ಪ್ರವೇಶಕ್ಕೆ ಅರ್ಜಿ ಆಹ್ವಾನ

ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ 2023-24ನೇ ಶೈಕ್ಷಣಿಕ ಸಾಲಿನ ಪಶುಸಂಗೋಪನೆಯಲ್ಲಿ 2 ವರ್ಷದ ಡಿಪ್ಲೋಮಾ ಕೋರ್ಸಿನ ಪ್ರವೇಶಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಪ್ರವೇಶ ಪಡೆದ ಎಲ್ಲಾ ಅಭ್ಯರ್ಥಿಗಳಿಗೆ ರೂ.1000/-ಗಳ ಮಾಸಿಕ ವೇತನವನ್ನು ವ್ಯಾಸಂಗದ ಅವಧಿಯಲ್ಲಿ
ನೀಡಲಾಗುತ್ತದೆ. ಆಸಕ್ತರು 20:07:2023 ರೊಳಗಾಗಿ ಅರ್ಜಿಯನ್ನು ಒರಿಜಿನಲ್ ಡಿಡಿಯೊಂದಿಗೆ ಭರ್ತಿ ಮಾಡಿದ ಅರ್ಜಿಯ ಲಕೋಟೆ ಮೇಲೆ ಪಶುಸಂಗೋಪನಾ ಇಪ್ಲೋಮಾ ಪ್ರವೇಶದ ಅರ್ಜಿ” ಎಂದು ನಮೂದಿಸಿ ನಿನಾಂಕ: 20.07,2023ರ ಸಾಯಂಕಾಲ 5.00 ಗಂಟೆ ಒಳಗೆ “ಕುಲಸಚಿವರು, ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾಲಿಕ ವಿಜ್ಞಾನಗಳ ವಿಶ್ವವಿದ್ಯಾಲಯ ಸಂದಿನಗರ, ಅಂಚೆ ಪೆಟ್ಟಗೆ ಸಂ. 6, ದರ – 585 226” ಇವರಿಗೆ ತಲುಪುವಂತೆ ಸಲ್ಲಿಸಬೇಕು. ನಿಗದಿತ ಸಮಯದೊಳಗೆ ತಲುಪದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

ಅಭ್ಯರ್ಥಿಗಳು ಮೊಬೈಲ್ ನಂಬರ್ / ದೂರವಾಣಿ / ಇ-ಮೇಲ್ ಐಡಿಯನ್ನು ಅರ್ಜಿಯಲ್ಲಿ ಭರ್ತಿ ಮಾಡತಕ್ಕದ್ದು. ಅಭ್ಯರ್ಥಿಗಳು ಒಂದು ಬಾರಿ ಮಾತ್ರ ಅರ್ಜಿಯನ್ನು ಸಲ್ಲಿಸಬೇಕು ಹಾಗೂ ಸಲ್ಲಸಿದ ನಂತರ ಯಾವುದೇ ಕಾರಣಕ್ಕೂ
ಅರ್ಜಿಯನ್ನು ತಿದ್ದುಪಡಿ ಮಾಡಲು ಅವಕಾಶವಿರುವುದಿಲ್ಲ.ಸರ್ಕಾರದ ಆದೇಶಗಳ ಅನ್ವಯ ಸೀಟುಗಳನ್ನು ಭರ್ತಿ ಮಾಡಲಾಗುವುದು ಎಂದು ಪ್ರಕಟಣೆ ಹೊರಡಿಸಲಾಗಿದೆ.

ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ: 21.06.2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20.07.2023

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read