ಸೌಂದರ್ಯ ಹೆಚ್ಚಿಸುತ್ತೆ ʼಆಪಲ್ ಸೈಡರ್ ವಿನೆಗರ್ʼ

ಆ್ಯಪಲ್ ಸೈಡರ್ ವಿನೆಗರ್ ಕೇವಲ ಅಡುಗೆ ಮನೆಯಲ್ಲಿ ಬಳಕೆಯಾಗುವ ವಸ್ತು ಎಂದುಕೊಂಡರೆ ಅದು ನಿಮ್ಮ ತಪ್ಪು, ಸೌಂದರ್ಯ ವೃದ್ಧಿಗೂ ಅದನ್ನು ಹಲವು ರೀತಿಯಲ್ಲಿ ಬಳಸಿಕೊಳ್ಳಬಹುದು. ಹೇಗೆನ್ನುತ್ತೀರಾ?

ಆಪಲ್ ಸೈಡರ್ ವಿನೆಗರ್ ಅನ್ನು ಸಣ್ಣ ಬಟ್ಟೆ ಅಥವಾ ಹತ್ತಿಯ ಉಂಡೆಗೆ ಹಚ್ಚಿ ಮುಖದಲ್ಲಿ ಮೂಡಿರುವ ಏಜ್ ಸ್ಪಾಟ್ಗಳ ಮೇಲೆ ಹಚ್ಚಿ. 20 ನಿಮಿಷದ ಬಳಿಕ ಮುಖವನ್ನು ಸ್ವಚ್ಛವಾಗಿ ತೊಳೆದರೆ ಹೊಳೆಯುವ ಆಕರ್ಷಕ ತ್ವಚೆ ನಿಮ್ಮದಾಗುತ್ತದೆ ಅಲ್ಲದೆ ಅ ಗುರುತುಗಳನ್ನು ಹೋಗಲಾಡಿಸಿ ನಿಮ್ಮ ವಯಸ್ಸನ್ನು ಇಳಿಸುತ್ತದೆ.

ಮುಖದಲ್ಲಿ ಜಿಡ್ಡಿನಂಶ ಇರುವವರು ಇದನ್ನು ಹಚ್ಚಿಕೊಂಡರೆ ಇದು ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕಿ ತ್ವಚೆಯ ಪಿಎಚ್ ಮಟ್ಟವನ್ನು ಸರಿಯಾಗಿ ಇರುವಂತೆ ನೋಡಿಕೊಳ್ಳುತ್ತದೆ. ಇದರಿಂದ ನಿಮ್ಮ ತ್ವಚೆ ಒಣಗದೆ ಆಕರ್ಷಕವಾಗಿಯೂ ಕಾಣುತ್ತದೆ.

ಮುಖದಲ್ಲಿ ಮೂಡಿರುವ ಮೊಡವೆ, ಅದರ ಕಲೆ ಮತ್ತಿತರ ಸಮಸ್ಯೆಗಳಿಗೂ ವಿನೆಗರ್ ನಲ್ಲಿ ಪರಿಹಾರವಿದೆ. ಬ್ಯಾಕ್ಟೀರಿಯಾ, ವೈರಸ್ ವಿರುದ್ಧ ಹೋರಾಡುವ ಇದು ಮುಖದಲ್ಲಿರುವ ಕಲೆಗಳನ್ನು ಹೋಗಲಾಡಿಸಿ ಮತ್ತೆ ಮೊಡವೆ ಮೂಡದಂತೆ ನೋಡಿಕೊಳ್ಳುತ್ತದೆ.

ಮುಖದಲ್ಲಿರುವ ಸತ್ತ ಜೀವಕೋಶಗಳನ್ನು ತೆಗೆದುಹಾಕಿ ವಯಸ್ಸಾದ ಲಕ್ಷಣಗಳಾದ ಸುಕ್ಕು ಅಥವಾ ಗೆರೆಗಳಿಂದ ಮುಕ್ತಿ ನೀಡುತ್ತದೆ. ಹಾಗಾಗಿ ವಾರಕ್ಕೊಮ್ಮೆ ಅಥವಾ ಎರಡು ಬಾರಿ ಇದನ್ನು ಬಳಸಿ, ನಿಮ್ಮ ತ್ವಚೆ ಬದಲಾಗುವುದನ್ನು ನೀವೇ ನೋಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read