ಅನ್ಯಭಾಗ್ಯ ಯೋಜನೆ : ಪಡಿತರ ಚೀಟಿಗೆ ಸಂಬಂಧಿಸಿದಂತೆ ಈ ನ್ಯೂನತೆಗಳಿದ್ದಲ್ಲಿ ಜು.20ರೊಳಗೆ ತಪ್ಪದೇ ಸರಿಪಡಿಸಿಕೊಳ್ಳಿ!

ಬಳ್ಳಾರಿ : ಅಂತ್ಯೋದಯ ಅನ್ನ(ಎ.ಎ.ವೈ) ಮತ್ತು ಆದ್ಯತಾ ಪಡಿತರ ಚೀಟಿ (ಬಿಪಿಎಲ್)ಗಳನ್ನು ಹೊಂದಿರುವ ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಅಥವಾ ಖಾತೆ ಹೊಂದದೇ ಇದ್ದಲ್ಲಿ ಹಾಗೂ ಇತರೆ ನ್ಯೂನ್ಯತೆಗಳಿದ್ದಲ್ಲಿ ನಗದು ವರ್ಗಾವಣೆ ಆಗುವುದಿಲ್ಲ ಹೀಗಾಗಿ ಇದನ್ನು ಸರಿಪಡಿಸಿಕೊಳ್ಳಬೇಕು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಮೊಹಮ್ಮದ್ ಖೈಜರ್ ಅವರು ತಿಳಿಸಿದ್ದಾರೆ.

ರಾಷ್ಟ್ರಿಯ ಭಧ್ರತಾ ಕಾಯ್ದೆಯನ್ವಯ 05 ಕೆ.ಜಿ. ಆಹಾರಧಾನ್ಯದೊಂದಿಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ 05 ಕೆ.ಜಿ. ಅಕ್ಕಿಯ ಖರೀದಿಗೆ ಕಾಲಾವಕಾಶ ಬೇಕಾಗಿರುವುದರಿಂದ ಅಕ್ಕಿಯ ಬದಲಾಗಿ ಪ್ರತಿ ಕೆ.ಜಿ.ಗೆ ರೂ.34 ರಂತೆ 5 ಕೆ.ಜಿ.ಗೆ ರೂ.170 ರಂತೆ ಪ್ರತಿ ಸದಸ್ಯರಿಗೆ ಅವರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಲು ಸರ್ಕಾರ ಆದೇಶಿಸಿದೆ.

ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿ ಹೊಂದಿರುವ ಫಲಾನುಭವಿಗಳು ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸದೇ ಇರುವುದು, ಮುಂತಾದ ನ್ಯೂನ್ಯತೆಗಳನ್ನು ಹೊಂದಿದ್ದಲ್ಲಿ ಯೋಜನೆಯಡಿ ನಗದು ಮೊತ್ತ                                                                                                                ವರ್ಗಾವಣೆ ಆಗುವುದಿಲ್ಲ.  ಆಧಾರ್‍ಸಂಖ್ಯೆಗೆ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಗೆ ಜೋಡಣೆ ಮಾಡದೇ ಇರುವುದು. ಪಡಿತರ ಚೀಟಿಯಲ್ಲಿ ಒಂದಕ್ಕಿಂತ ಹೆಚ್ಚು ಮುಖ್ಯಸ್ಥರಿದ್ದಾಗ ಅಥವಾ ಮುಖ್ಯಸ್ಥರೇ ಇಲ್ಲದಿದ್ದ ಸಂದರ್ಭದಲ್ಲಿ, ಆಧಾರ್ ಸಂಖ್ಯೆಯನ್ನು ತಪ್ಪಾಗಿ ನಮೂದಿಸಿರುವುದು, ಬ್ಯಾಂಕಿನಲ್ಲಿ ಇ-ಕೆವೈಸಿ ಕಾರ್ಯ ಪೂರ್ಣಗೊಳಿಸದೇ ಇರುವುದು, ಕಳೆದ ಮೂರು ತಿಂಗಳಲ್ಲಿ ಒಂದು ತಿಂಗಳಾದರು ಪಡಿತರ ಸಾಮಗ್ರಿಯನ್ನು ಪಡೆಯದೆ ಇದ್ದಲ್ಲಿಯೂ ನಗದು ಮೊತ್ತ ಫಲಾನುಭವಿಯ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗುವುದಿಲ್ಲ.

ಮೇಲ್ಕಂಡ ನ್ಯೂನತೆಗಳನ್ನು ಜುಲೈ 20 ರೊಳಗಾಗಿ ಸರಿಪಡಿಸಿಕೊಂಡಲ್ಲಿ ಆಗಸ್ಟ್ ಮಾಹೆಗೆ ಸಂಬಂಧಿಸಿದಂತೆ ಹಣವನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸಲು ಕ್ರಮ ವಹಿಸಲಾಗುವುದು.

ಪಡಿತರ ಚೀಟಿಯ ಫಲಾನುಭವಿಯು ತಮ್ಮ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯ ವಿವರಗಳನ್ನು ಚಿhಚಿಡಿಚಿ.ಞಚಿಡಿ.ಟಿiಛಿ.iಟಿ ವೆಬ್‍ಸೈಟ್‍ಲ್ಲಿ ಪಡಿತರ ಚೀಟಿ ವಿವರ ನಮೂದಿಸಿ ಪರಿಶೀಲಿಸಬಹುದು. ಫಲಾನುಭವಿಯು ನೇರವಾಗಿ ಡಿಬಿಟಿ ಕರ್ನಾಟಕ ಆಪ್‍ನ್ನು ತಮ್ಮ ಮೊಬೈಲ್‍ಗೆ  ಡೌನ್‍ಲೋಡ್ ಮಾಡಿಕೊಂಡು ಫಲಾನುಭವಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ ಡಿ.ಬಿ.ಟಿ ಮೂಲಕ ಜಮೆ ಆಗಿರುವ ಮೊತ್ತದ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

ಬ್ಯಾಂಕ್ ಖಾತೆ ಹೊಂದದೇ ಇರುವ ಫಲಾನುಭವಿಗೆ ಸಂಬಂಧಪಟ್ಟ ಆಹಾರ ಶಿರಸ್ತೇದಾರ್ ಅಥವಾ ಆಹಾರ ನಿರೀಕ್ಷಕರು ನ್ಯಾಯಬೆಲೆ ಅಂಗಡಿಯವರ ಸಹಯೋಗದೊಂದಿಗೆ ಹತ್ತಿರದ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಬ್ಯಾಂಕ್ ಖಾತೆಯನ್ನು ತೆರೆಯಲು ಅವಕಾಶವಿದೆ.

    ಅಂತ್ಯೋದಯ, ಹಾಗೂ ಆದ್ಯತಾ ಪಡಿತರ ಚೀಟಿದಾರರಿಗೆ 5 ಕೆ.ಜಿ. ಅಕ್ಕಿ ಬದಲಾಗಿ ನಗದನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸುವ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯನ್ನು ಪಡಿತರ ಚೀಟಿದಾರರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಮೊಹಮ್ಮದ್ ಖೈಜರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read