ರಾಜೀವ್ ಚಂದ್ರಕಾಂತ್ ನಿರ್ದೇಶನದ ‘ತೂಫಾನ್’ ಚಿತ್ರ ಈಗಾಗಲೇ ತನ್ನ ಟೈಟಲ್ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಒಂದರ ಮೇಲೊಂದು ಸಿಹಿ ಸುದ್ದಿಯನ್ನು ನೀಡುತ್ತಲೇ ಇದೆ. ಗ್ಲಿಮ್ಸ್ ವಿಡಿಯೋ ಒಂದನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದ ಚಿತ್ರ ತಂಡ ಇದೀಗ ನಟಿ ಅನುಷಾ ರೈ ಅವರ ಪಾತ್ರವನ್ನು ರಿವೀಲ್ ಮಾಡಿದೆ. ಅನುಷಾ ರೈ ಈ ಸಿನಿಮಾದಲ್ಲಿ ನಿಧಿ ಎಂಬ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮತ್ತೊಂದೆಡೆ ನಟ ಸೂರ್ಯ ಪ್ರವೀಣ್ ಅವರ ಪಾತ್ರವನ್ನು ಸಹ ಪರಿಚಯ ಮಾಡಲಾಗಿದ್ದು, ಗಿರಡ್ಡಿ ಭದ್ರನಾಗಿ ಕಾಣಿಸಿಕೊಳ್ಳಲಿದ್ದಾರೆ.
ಈ ಚಿತ್ರವನ್ನು ಎಸ್ ಆರ್ ಪಿಚರ್ಸ್ ಹಾಗೂ ಕೆ ಆರ್ ಜಿ ಮೂವೀಸ್ ಬ್ಯಾನರ್ ನಡಿ ಶರೀಫ ಬೇಗಮ್ ನಿರ್ಮಾಣ ಮಾಡಿದ್ದು, ಉಮೇಶ್ ಆರ್ ಬಿ ಸಂಕಲನ, ರವಿವರ್ಮ ಛಾಯಾಗ್ರಹಣ ಹಾಗೂ ನರಸಿಂಹ ಅವರ ಸಾಹಸ ನಿರ್ದೇಶನವಿದೆ. ಸಚಿನ್ ಬಸ್ರೂರ್ ಸಂಗೀತ ಸಂಯೋಜನೆ ನೀಡಿದ್ದಾರೆ.
https://twitter.com/A2MusicSouth/status/1808399442116026390