ರಾಜ್ಯದಲ್ಲಿ ದಲಿತ ವಿರೋಧಿ ದರ್ಬಾರ್ ಮಿತಿ ಮೀರಿದೆ : ಸರ್ಕಾರದ ವಿರುದ್ಧ ಬಿಜೆಪಿ ವಾಗ್ಧಾಳಿ

ಬೆಂಗಳೂರು : ರಾಜ್ಯದಲ್ಲಿ ದಲಿತ ವಿರೋಧಿ ದರ್ಬಾರ್ ಮಿತಿ ಮೀರಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ವಾಗ್ಧಾಳಿ ನಡೆಸಿದೆ.

ರಾಜ್ಯದಲ್ಲಿ ಕಾಂಗ್ರೆಸ್ ನ ದಲಿತ ವಿರೋಧಿ ದರ್ಬಾರ್ ಮಿತಿ ಮೀರಿದೆ. ಬಿಜೆಪಿ ಎಸ್ಸಿ ಮೋರ್ಚಾದ ಕಾರ್ಯಕರ್ತ ಪೃಥ್ವಿ ಸಿಂಗ್ ಮೇಲೆ ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮ ಚನ್ನರಾಜ್ ಹಟ್ಟಿಹೊಳಿ ಆಪ್ತರ ಪಡೆ ಹಲ್ಲೆ ನಡೆಸಿರುವುದು ಕಾಂಗ್ರೆಸ್ನ ದಲಿತ ವಿರೋಧಿ ನೀತಿಯ ಮುಂದುವರಿದ ಭಾಗ. ಪೊಲೀಸರು ಸುದೀರ್ಘ ಅವಧಿಯವರೆಗೆ ಪ್ರಕರಣ ದಾಖಲಿಸದಿರುವುದು ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂಬುದನ್ನು ತೋರಿಸುತ್ತದೆ. ಹಲ್ಲೆ ನಡೆಸಲು ಆಜ್ಞೆ ನೀಡಿದ್ದಲ್ಲದೇ, ಹಲ್ಲೆ ನಡೆಯುವಾಗ ಪೃಥ್ವಿ ಸಿಂಗ್ ಮನೆ ಎದುರು ಓಡಾಡಿ ವಿಘ್ನ ಸಂತೋಷ ಮೆರೆದ ಚನ್ನರಾಜ್ ಹಟ್ಟಿಹೊಳಿಗೆ ಕಾಂಗ್ರೆಸ್ ಸರ್ಕಾರ ರಾಜ ರಕ್ಷಣೆ ನೀಡುತ್ತಿರುವುದು ರಾಜ್ಯದ ಕಾನೂನು ಸುವ್ಯವಸ್ಥೆಯ ಶೋಚನೀಯ ಸ್ಥಿತಿಗೆ ನಿದರ್ಶನ ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ವಾಗ್ಧಾಳಿ ನಡೆಸಿದೆ.

https://twitter.com/BJP4Karnataka/status/1731896675633893850

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read