ಉತ್ತರಿಸಿ ಕುಮಾರಸ್ವಾಮಿ… ; ನೂತನ ಕೇಂದ್ರ ಸಚಿವರಿಗೆ ಕಾಂಗ್ರೆಸ್ ನಿಂದ ಪ್ರಶ್ನೆಗಳ ಸುರಿಮಳೆ..!

ಬೆಂಗಳೂರು : ಕೇಂದ್ರ ಉಕ್ಕು ಸಚಿವರಾಗಿ ಅಧಿಕಾರ ಸ್ವೀಕರಿಸಿದ ಹೆಚ್.ಡಿ ಕುಮಾರಸ್ವಾಮಿಗೆ ಕಾಂಗ್ರೆಸ್ ಪ್ರಶ್ನೆಗಳ ಸುರಿಮಳೆ ಸುರಿಸಿದೆ.

ನರೇಂದ್ರ ಮೋದಿ ಅವರ ಈ ಹಿಂದಿನ ಸರ್ಕಾರ ದುರ್ಗಾಪುರದ ಅಲೊಯ್ ಉಕ್ಕಿನ ಕಾರ್ಖಾನೆ ಮಾರಾಟ ಮಾಡಲು ಪ್ರಯತ್ನಿಸಿತ್ತು. ಕುಮಾರಸ್ವಾಮಿ ಅವರು ಈ ಕಾರ್ಖಾನೆಯ ಖಾಸಗಿಕರಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಪಶ್ಚಿಮ ಬಂಗಾಳ, ದುರ್ಗಾಪುರದ ಜನರಿಗೆ ಭರವಸೆ ನೀಡಬಲ್ಲರೇ?

ಮೋದಿ ಸರ್ಕಾರ 2022ರ ಅಕ್ಟೋಬರ್ನಿಂದ ಕರ್ನಾಟಕದ ಭದ್ರಾವತಿಯ ವಿಶ್ವೇಶ್ವರಯ್ಯ ಉಕ್ಕು ಹಾಗೂ ಕಬ್ಬಿಣ ಕಾರ್ಖಾನೆ ಮುಚ್ಚಿದೆ. ಕುಮಾರಸ್ವಾಮಿ ಅವರು ವಿಐಎಸ್ಎಲ್ ಕಾರ್ಖಾನೆ ಮುಚ್ಚುವ ನಿರ್ಧಾರವನ್ನು ಕೈಬಿಟ್ಟು ಕಾರ್ಖಾನೆ ಉಳಿವಿಗೆ ಅಗತ್ಯ ಕ್ರಮ ಕೈಗೊಳ್ಳುವರೇ?ನಗರ್ನಾರ್ ಉಕ್ಕು ಕಾರ್ಖಾನೆಯನ್ನು ಖಾಸಗೀಕಾರಣ ಮಾಡುವುದಕ್ಕೆ ಕೇಂದ್ರದ ಬಿಜೆಪಿ ಸರ್ಕಾರ ಮುಂದಾಗಿತ್ತು, ಸಾವಿರಾರು ಕಾರ್ಮಿಕರಿಗೆ ಉದ್ಯೋಗದ ಭರವಸೆಯಾಗಿದ್ದ ಈ ಕಾರ್ಖಾನೆಯನ್ನು ಉಳಿಸಲು ಕುಮಾರಸ್ವಾಮಿಯವರ ಬದ್ಧತೆ ಏನು?’

ಸರ್ಕಾರಿ ಸ್ವಾಮ್ಯದ ಸೇಲಂ ಉಕ್ಕಿನ ಖಾರ್ಕಾನೆಯನ್ನು ಖಾಸಗಿಯವರಿಗೆ ಮಾರಾಟ ಮಾಡುವ ಹುನ್ನಾರದೊಂದಿಗೆ ಮೋದಿ ಸರ್ಕಾರ 2019ರಿಂದ ಬಂಡವಾಳ ಹೂಡಿಕೆಯನ್ನು ಸ್ಥಗಿತಗೊಳಿಸಿದೆ ಕಾರ್ಮಿಕರು, ಭೂಮಿ ನೀಡಿದ ರೈತರು ಪ್ರತಿಭಟನೆ ನಡೆಸಿದ್ದಾರೆ ಕುಮಾರಸ್ವಾಮಿಯವರೇ ಸರ್ಕಾರದ ಈ ಕಾರ್ಖಾನೆಯನ್ನು, ಕಾರ್ಮಿಕರ ಬದುಕನ್ನು ಉಳಿಸುವ ಕೆಲಸ ಮಾಡುವರೇ?

ಹಿಂದೆ ಮೋದಿ ಸರ್ಕಾರ ವೈಜಾಗ್ ಸ್ಟೀಲ್ ಪ್ಲಾಂಟ್ ನ ಪೂರ್ಣ ಖಾಸಗೀಕರಣಕ್ಕೆ ಮುಂದಾಗಿತ್ತು 1 ಲಕ್ಷ ಕಾರ್ಮಿಕರು ನಿರಾಶ್ರಿತರಾಗುವ ಆತಂಕದಲ್ಲಿ ಖಾಸಗೀಕರಣದ ವಿರುದ್ಧ ಪ್ರತಿಭಟಸುತ್ತಿದ್ದಾರೆ ಕೇಂದ್ರ ಉಕ್ಕು ಸಚಿವರಾದ ಕುಮಾರಸ್ವಾಮಿ ಅವರು ಸರ್ಕಾರದ ಆಸ್ತಿಯಾದ RINL ಮಾರಾಟ ಮಾಡುವುದಿಲ್ಲ ಎಂದು ಲಿಖಿತ ಭರವಸೆ ನೀಡುವರೇ?  ಎಂದು ಹೆಚ್.ಡಿ ಕುಮಾರಸ್ವಾಮಿಗೆ ಕಾಂಗ್ರೆಸ್ ಪ್ರಶ್ನೆಗಳ ಸುರಿಮಳೆ ಸುರಿಸಿದೆ.

https://twitter.com/INCKarnataka/status/1800906952303583658

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read