ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಅಳವಡಿಸಿದ್ದ ANPR ಕ್ಯಾಮರಾ ಮೂರೇ ದಿನಕ್ಕೆ ಸ್ಥಗಿತ

ಬೆಂಗಳೂರು: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇಯಲ್ಲಿ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಎ.ಎನ್.ಪಿ.ಆರ್ (Automatic number plate recognition camera) ಅಳವಡಿಸಿದ್ದು, ಆದರೆ ಮೂರೇ ದಿನಕ್ಕೆ ಕ್ಯಾಮರಾ ಬಂದ್ ಆಗಿದೆ.

ಬೆಂಗಳೂರು-ಮೈಸೂರು ದಶಪಥ ರಸ್ತೆ ಆರಂಭವಾದಾಗಿನಿಂದ ಒಂದಲ್ಲ ಒಂದು ವಿವಾದಕ್ಕೆ ಕಾರಣವಾಗುತ್ತಿದೆ. ಎಕ್ಸ್ ಪ್ರೆಸ್ ವೇ ಆರಂಭವಾದಾಗಿನಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗಿದ್ದು, ಸಾವು-ನೋವುಗಳು ಹೆಚ್ಚಾಗಿವೆ. ಅಪಘಾತಗಳನ್ನು ತಡೆಗಟ್ಟಲು ಎನ್.ಹೆಚ್.ಎ.ಐ ಹಾಗೂ ಪೊಲೀಸ್ ಇಲಾಖೆ ಹಲವು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತಿವೆ. ಈ ನಿಟ್ಟಿನಲ್ಲಿ ಎಕ್ಸ್ ಪ್ರೆಸ್ ವೇನಲ್ಲಿ ಆಗಸ್ಟ್ 1ರಿಂದ ಬೈಕ್, ಆಟೋ, ಟ್ಯಾಕ್ಟರ್ ಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ವಾಹನಗಳ ವೇಗಕ್ಕೆ ಕಡಿವಾಣ ಹಾಕಲು ಎ.ಎನ್.ಪಿ.ಆರ್ ಕ್ಯಾಮರಾ ಅಳವಡಿಸಲಾಗಿದೆ.

ದಿನದ 24 ಗಂಟೆ ಕಾರ್ಯನಿರ್ವಹಿಸುವ ಈ ಕ್ಯಾಮರಾಗಳು ವಾಹನಗಳ ನಂಬರ್ ಪ್ಲೇಟ್ ಗಳನ್ನು ರೀಡ್ ಮಾಡಿ, 100 ಕಿ.ಮೀಗಿಂತ ವೇಗವಾಗಿ ಸಂಚಾರ ಮಾಡುವ ವಾಹನಗಳ ಮಾಹಿತಿಯನ್ನು ಎನ್.ಹೆಚ್.ಎ.ಐ ಕಂಟ್ರೋಲ್ ರೂಮ್ ಹಾಗೂ ಪೊಲೀಸ್ ಇಲಾಖೆಗೆ ರವಾನಿಸುತ್ತದೆ. ಇದರ ಆಧಾರದ ಮೇಲೆ ಸಂಚಾರಿ ಪೊಲೀಸರು ವಾಹನಗಳಿಗೆ ದಂಡ ವಿಧಿಸುತ್ತಾರೆ.

ಆದರೆ ಕ್ಯಾಮರಾ ಅಳವಡಿಸಿ ಕೇವಲ ಮೂರು ದಿನಕ್ಕೆ ಎ.ಎನ್.ಪಿ.ಆರ್.ಕ್ಯಾಮರಾ ಕಾರ್ಯನಿರ್ವಹಣೆ ಬಂದ್ ಆಗಿದೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕ್ಯಾಮರಾ ಸ್ಥಗಿತಗೊಂಡಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇನ್ನೊಂದೆಡೆ ಮುಖ್ಯಮಂತ್ರಿಗಳು ಬಂದು ಪರಿಶೀಲನೆ ನಡೆಸುತ್ತಾರೆ ಎಂಬ ಕಾರಣಕ್ಕಷ್ಟೇ ಕ್ಯಾಮರಾ ಅಳವಡಿಕೆ ಸೀಮಿತವಾಗಿತ್ತು. ಈಗ ಏಕಾಏಕಿ ಕ್ಯಾಮರಾ ಬಂದ್ ಮಾಡಲಾಗಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read