ಅಮೆರಿಕದ ಅಲಬಾಮದಲ್ಲಿ ನಡೆದ ಒಂದು ಆಘಾತಕಾರಿ ಘಟನೆಯಲ್ಲಿ, ಶಾಲೆಯ ಉದ್ಯೋಗಿಯೊಬ್ಬರು ಅಪ್ರಾಪ್ತ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಕ್ಕಾಗಿ ಬಂಧನಕ್ಕೊಳಗಾಗಿದ್ದಾರೆ. ಲಾಡರ್‌ಡೇಲ್ ಕೌಂಟಿ ಶಾಲೆಗಳಲ್ಲಿ ಕೆಲಸ ಮಾಡುತ್ತಿದ್ದ 41 ವರ್ಷದ ವಿವಾಹಿತ ಮಹಿಳೆ ಆಮಿ ನಿಕೋಲ್ ವಿಗ್ಗಿಂಟನ್ ಎಂಬಾಕೆಯೇ ಆರೋಪಿ.
ವಿಚಾರಣೆ ವೇಳೆ ಆಕೆ ತಾನು ಮಾರ್ಚ್ ತಿಂಗಳಲ್ಲಿ ವಿದ್ಯಾರ್ಥಿಯೊಂದಿಗೆ ಲೈಂಗಿಕ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾಳೆ. ಅಲಬಾಮದಲ್ಲಿ ಸಮ್ಮತಿಯ ವಯಸ್ಸು 16 ವರ್ಷಗಳಾಗಿದ್ದರೂ, ಆರೋಪಿ ಶಾಲಾ ಉದ್ಯೋಗಿಯಾಗಿರುವುದರಿಂದ ಮತ್ತು ಬಲಿಪಶು 18 ವರ್ಷದೊಳಗಿನವನಾಗಿದ್ದರಿಂದ ಆಕೆಗೆ ಕಠಿಣ ಕಾನೂನು ಕ್ರಮ ಎದುರಾಗಲಿದೆ.
ಪ್ರಸ್ತುತ ಆಕೆಯನ್ನು 1 ಲಕ್ಷ ಡಾಲರ್ ಬಾಂಡ್ ಮೇಲೆ ಬಂಧಿಸಲಾಗಿದ್ದು, ಶಾಲಾ ಆಡಳಿತ ಮಂಡಳಿಯು ಆಕೆಯನ್ನು ಕರ್ತವ್ಯದಿಂದ ಅಮಾನತುಗೊಳಿಸಿದೆ. ಈ ಘಟನೆಯು ಶಿಕ್ಷಣ ಸಂಸ್ಥೆಗಳಲ್ಲಿನ ನೈತಿಕತೆ ಮತ್ತು ಸುರಕ್ಷತೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
Kristopher Waite, 50, Westside Elementary School physical education teacher, was arrested after he was accused of taping a female student to a chair.
— Orietta Rose 🇺🇲 (@0riettaRose) April 4, 2025
Florida