‘ಕಿರಾತಕ 2’ ಚಿತ್ರದ ಮತ್ತೊಂದು ಹಾಡು ರಿಲೀಸ್

ಪ್ರದೀಪ್ ರಾಜ್ ನಿರ್ದೇಶನದ ಆರ್ ಕೆ ತೇಜಸ್ ಅಭಿನಯದ ಬಹು ನಿರೀಕ್ಷಿತ ‘ಕಿರಾತಕ 2’ ಚಿತ್ರದ ‘ನೀ ಬಂದರೆ’ ಎಂಬ ಮೆಲೋಡಿ ಹಾಡು ನಿನ್ನೆ ಆನಂದ್ ಅಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ಈ ಹಾಡಿಗೆ ಅರ್ಫಾಜ್ ಉಲ್ಲಾಳ್  ಧ್ವನಿಯಾಗಿದ್ದು, ಪ್ರದ್ದಿಯೋತ್ತನ್ ಸಂಗೀತ ಸಂಯೋಜನೆ ನೀಡಿದ್ದಾರೆ. ಇನ್ನುಳಿದಂತೆ  ಕವಿರಾಜ್ ಅವರ ಸಾಹಿತ್ಯವಿದೆ.

ಬೈಂದೂರ್ ಕನ್ಸ್ಟ್ರಕ್ಷನ್ ಬ್ಯಾನರ್ ನಲ್ಲಿ ಎಂಬಿ ಬೈಂದೂರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಆರ್ಕೆ ತೇಜಸ್ ಸೇರಿದಂತೆ ಯಶ್ ಶೆಟ್ಟಿ ಮತ್ತು ಶಿವಾನಿ ಪ್ರಮುಖ ಪಾತ್ರದಲ್ಲಿದ್ದಾರೆ. ಮನು ಕಿರಂಗೂರ್ ಸಹ ನಿರ್ದೇಶಕರಾಗಿದ್ದು, ಸುಜಯ್ ಕುಮಾರ್ ಬಾವಿಕಟ್ಟಿ ಛಾಯಾಗ್ರಹಣ, ರಾಮ್ಜ್  ನೃತ್ಯ ನಿರ್ದೇಶನವಿದೆ. ಮುಂದಿನ ತಿಂಗಳು ಜೂನ್ 30ಕ್ಕೆ ಈ ಸಿನಿಮಾ ರಾಜ್ಯಾದ್ಯಂತ ತೆರೆ ಮೇಲೆ ಬರಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read