RCB ಗಾಗಿ ಮತ್ತೊಂದು ಹಾಡು ರಿಲೀಸ್

ಐಪಿಎಲ್  ಬಂದು ಸುಮಾರು ವರ್ಷಗಳಾದರೂ ರಾಯಲ್ ಚಾಲೆಂಜರ್ಸ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇನ್ನೂ ಆದರೂ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ, ಆದರೂ ಆರ್‌ಸಿಬಿ ತಂಡದ  ಅಭಿಮಾನಿಗಳು ಈ ಸಲ ಕಪ್ ನಮ್ದೇ ಎಂಬ ಮಾತನ್ನು ಪ್ರತಿ ವರ್ಷವೂ ಹೇಳುತ್ತಾರೆ. ಆರ್ಸಿಬಿ ಅಭಿಮಾನಿಗಳು ತಮ್ಮ ನೆಚ್ಚಿನ ತಂಡಕ್ಕಾಗಿ ಈಗಾಗಲೇ ಸಾಕಷ್ಟು ಹಾಡುಗಳನ್ನು ತಯಾರು ಮಾಡಿದ್ದು, ಇದೀಗ ಮತ್ತೊಂದು ಹಾಡನ್ನು ನಿನ್ನೆಯಷ್ಟೇ ಯೂಟ್ಯೂಬ್ ನಲ್ಲಿ ರಿಲೀಸ್ ಮಾಡಿದ್ದಾರೆ. ಈ ಹಾಡಿಗೆ ಮೆಚ್ಚುಗೆಯ ಸುರಿಮಳೆಯೇ ಹರಿದು ಬಂದಿದೆ.

‘ಸೋತ್ರೂ ಗೆದ್ರೂ ಆರ್ಸಿಬಿ ನೇ’ ಎಂಬ ಈ ಹಾಡಿಗೆ ಖ್ಯಾತ ಗಾಯಕಿ ಶಿವಾನಿ ನವೀನ್, ಸುಪ್ರೀತ್ ಮತ್ತು ಕೆ ಪಿ ಮಿಲನ್ ಕುಮಾರ್ ಧ್ವನಿಯಾಗಿದ್ದು, ಸಂದೇಶ್ ಬಾಬಣ್ಣ ಸಂಗೀತ ಸಂಯೋಜನೆ ನೀಡಿದ್ದಾರೆ. ಈ ಹಾಡು ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಸೌಂಡ್ ಮಾಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read