ಯೋಗರಾಜ್ ಭಟ್ ನಿರ್ದೇಶನದ ‘ಮನದ ಕಡಲು’ ಚಿತ್ರದ ಮೆಲೋಡಿ ಹಾಡೊಂದು ಇತ್ತೀಚಿಗಷ್ಟೇ youtube ನಲ್ಲಿ ಭರ್ಜರಿ ಸೌಂಡ್ ಮಾಡಿದ್ದು, ಇದರ ಮತ್ತೊಂದು ಗೀತೆ ಇದೆ ಜನವರಿ 8ಕ್ಕೆ ಬಿಡುಗಡೆಯಾಗುತ್ತಿದೆ. ತುರ್ರಾ ಎಂಬ ವಿಭಿನ್ನ ಹೆಸರಿನ ಈ ಹಾಡಿಗೆ ವಿ ಹರಿಕೃಷ್ಣ ಪ್ರಾರ್ಥನಾ ಮತ್ತು ಸಂಜಿತ್ ಹೆಗ್ಡೆ ಧ್ವನಿಯಾಗಿದ್ದು, ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದಾರೆ.
ಈ ಚಿತ್ರವನ್ನು EK ಎಂಟರ್ಟೈನರ್ಸ್ ಬ್ಯಾನರ್ ನಲ್ಲಿ ಇ ಕೃಷ್ಣಪ್ಪ ನಿರ್ಮಾಣ ಮಾಡಿದ್ದು, ಸುಮುಖ ಮತ್ತು ರಾಶಿಕಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೆಎಂ ಪ್ರಕಾಶ್ ಸಂಕಲನ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಹಾಗೂ ವಿ ಮುರಳಿ ಅವರ ನೃತ್ಯ ನಿರ್ದೇಶನವಿದೆ. ಸಚಿನ್ ಶೆಟ್ಟಿ ಕುಂಬ್ಳೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.